ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಮಂಗಳೂರಿನಿoದ ಹೊಸಪೇಟೆಯ ಕಡೆ ಹೋಗುತ್ತಿದ್ದ ಡೀಸೆಲ್ ತುಂಬಿದ ಟ್ಯಾಂಕರ್ ಪಲ್ಟಿಯಾದ ಘಟನೆ ಹೊನ್ನಾವರ ತಾಲೂಕಿನ ಕರ್ಕಿ ನಾಕಾ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದಿದೆ.
ಪಲ್ಟಿಯಾದ ರಭಸಕ್ಕೆ ವಾಹನ ಒಂದು ಬದಿಯಲ್ಲಿ ಜಖಂ ಆಗಿ ಡೀಸೆಲ್ ಸೋರಿಕೆಯಾಗಿದೆ. ಡಿಸೇಲ್ ಸೋರಿಕೆಯಿಂದಾಗಿ ಸಮೀಪದ ಅಂಗಡಿ ಮುಂಗಟ್ಟುಗಳು ಹಾಗೂ ಮನೆಯವರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅನಾಹುತ ಸಂಭವಿಸಿದoತೆ ಜಾಗೃತೆ ವಹಿಸಿದರು. ಟ್ಯಾಂಕರ್ ಚಾಲಕ ಹನುಮೇಗೌಡ ಯಾವುದೇ ಪ್ರಾಣಾಪಯವಿಲ್ಲದೇ ಪಾರಾಗಿದ್ದಾರೆ. ಈ ಸಂಬoಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.