• first
  second
  third
  previous arrow
  next arrow
 • ಗಾಂಜಾ ಸಾಗಾಟ; ಅಭಿಷೇಕ ಹೆಗಡೆ ಸೇರಿ ಈರ್ವರ ಬಂಧನ

  300x250 AD

  ಶಿರಸಿ: ಬೈಕ್ ಒಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿಯ ಮರದಲ್ಲಿ ಮಾರುತಿ ದೇವಸ್ಥಾನದ ಬಳಿ ಈರ್ವರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡು, ಅವರ ಬಳಿಯಿದ್ದ 136 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

  ಇಲ್ಲಿಯ ಗಣೇಶನಗರ ನಿವಾಸಿ ಅಭಿಷೇಕ್ ಶ್ರೀಧರ ಹೆಗಡೆ (23), ಹಾಗು ಹನುಮಂತಿಯ ಮಂಜುನಾಥ ಉದಯ್ ಮಾನೆ(23) ಬೈಕ್ ನಲ್ಲಿ ದಾಸನಕೊಪ್ಪ ಕಡೆಯಿಂದ ಉಸುರಿ ರಸ್ತೆ ಮಾರ್ಗವಾಗಿ ಶಿರಸಿ ಕಡೆಗೆ ಗಾಂಜಾ ಸಾಗಾಟ ಮಾಡಿಕೊಂಡು ಬರುತ್ತಿರುವಾಗ ಪೋಲೀಸರು ಹಠಾತ್ ದಾಳಿ ಮಾಡಿ, ಆರೋಪಿತರಿಂದ ಸುಮಾರು ರೂ.4,000 ಬೆಲೆಯ 136 ಗ್ರಾಂ ಗಾಂಜಾವನ್ನು ಹಾಗೂ ಗಾಂಜ ಸಾಗಾಟ ಮಾಡಲು ಬಳಸಿದ ಸುಮಾರು ರೂ. 50,000 ಬೆಲೆಯ ಬೈಕ್ ಹಾಗೂ ರೂ.1280 ನಗದು ಹಣ ವಶಪಡಿಸಿಕೊಂಡಿದ್ದು, ಶಿರಸಿ ಗ್ರಾಮೀಣ ಪೋಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  300x250 AD

  ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಪೆನ್ನೇಕರ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್‌ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ರವಿ.ಡಿ.ನಾಯ್ಕ, ಪೊಲೀಸ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ, ಶಿರಸಿ ಗ್ರಾಮೀಣ ಠಾಣೆಯ ಪಿಎಸೈ ಈರಯ್ಯ.ಡಿ.ಎನ್. ನೇತೃತ್ವದಲ್ಲಿ ಸಿಬ್ಬಂದಿಗಳಾದ ಚೇತನ್‌ ಕುಮಾರ್‌ ಹಲಗೇರಿ, ಸುರೇಶ್, ಗಣಪತಿ ನಾಯ್ಕ, ಜಮ್ಮು ಸಿಂಧೆ, ಚೇತನ್ ಜೆ.ಎನ್. ಸಂಗಪ್ಪ, ಸುನೀಲ ಹಡಲಗಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

  Share This
  300x250 AD
  300x250 AD
  300x250 AD
  Back to top