• first
    second
    third
    previous arrow
    next arrow
  • ಜವಳಿ ಉದ್ಯಮದ ಉತ್ತೇಜನಕ್ಕೆ ಪಿಎಲ್‌ಐ ಯೋಜನೆ ಅನುಮೋದಿಸಿದ ಕೇಂದ್ರ

    300x250 AD

    ನವದೆಹಲಿ: ಭಾರತದ ಜವಳಿ ಉದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಐದು ವರ್ಷಗಳ ಅವಧಿಯಲ್ಲಿ 1,683 ಕೋಟಿ ರೂಪಾಯಿಗಳ ಅನುಮೋದಿತ ವೆಚ್ಚದೊಂದಿಗೆ ಜವಳಿಗಾಗಿ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆ (ಪಿಎಲ್‌ಐ) ಗೆ ಸರ್ಕಾರ ಅನುಮೋದನೆ ನೀಡಿದೆ.

    ದೇಶದಲ್ಲಿ ಮಾನವ ನಿರ್ಮಿತ ಫೈಬರ್ ಉಡುಪುಗಳು, ಮಾನವ ನಿರ್ಮಿತ ಬಟ್ಟೆಗಳು ಮತ್ತು ತಾಂತ್ರಿಕ ಜವಳಿ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

    ಈ ನಿಟ್ಟಿನಲ್ಲಿ, ಪಿಎಲ್‌ಐ ಯೋಜನೆಗೆ ಕಾರ್ಯಾಚರಣಾ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲಾಗಿದೆ.

    ಜವಳಿ ಸಚಿವಾಲಯವು ಪಿಎಲ್‌ಐ ಪೋರ್ಟಲ್ ಮೂಲಕ  ಜನವರಿ 1 ರಿಂದ ಜವಳಿಗಾಗಿ ಪಿಎಲ್‌ಐ ಯೋಜನೆಯಡಿ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸಲಿದೆ.

    300x250 AD

    ಪಿಎಲ್‌ಐ ಪೋರ್ಟಲ್ https://pli.texmin.gov.in/mainapp/Default ನಲ್ಲಿ ಅರ್ಜಿ ಸಲ್ಲಿಸಬಹುದು.

    ಜನವರಿ 1 ರಿಂದ 31 ರವರೆಗೆ ಅಪ್ಲಿಕೇಶನ್ ವಿಂಡೋ ತೆರೆದಿರುತ್ತದೆ.

    Share This
    300x250 AD
    300x250 AD
    300x250 AD
    Back to top