ಶಿರಸಿ: ಎಮ್.ಇ. ಎಸ್ ಮಹಾವಿದ್ಯಾಲಯದ ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿನಿ ಧನುಶ್ರೀ ದೀಕ್ಷಿತ್ ಇವಳು ಬೆಂಗಳೂರಿನ ‘ನೆಹರು ಯುವ ಕೇಂದ್ರ ಸಂಘಟನೆ’ಯವರು ಬುಧವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವಳು ಹೆಗಡೆಕಟ್ಟಾ ದ ಪಂಚಲಿಂಗದ ವೀರೇಶ ದೀಕ್ಷಿತ್ ಮತ್ತು ಚೇತನಾ ದೀಕ್ಷಿತ್ ಇವರ ಪುತ್ರಿಯಾಗಿದ್ದಾಳೆ.
ಇವಳ ಸಾಧನೆಗೆ ಎಮ್. ಇ.ಎಸ್ ಅಧ್ಯಕ್ಷ ಜಿ ಎಂ ಹೆಗಡೆ ಮುಳಖಂಡ, ಕಾಲೇಜು ಸಮಿತಿ ಚೇರ್ಮನ್ ವರೀಂದ್ರ ಕಾಮತ್, ಪ್ರಾಚಾರ್ಯ ಡಾ.ಟಿ.ಎಸ್ ಹಳೆಮನೆ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.