ಕಾರವಾರ:ಕೋಮಾರಪಂಥ ಸಮಾಜದ ಬಿಣಗಾ ಘಟಕವು ಸ್ಥಳೀಯ ಮಟ್ಟದಲ್ಲಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. 2020-21ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆ ಹೊಂದಿದ ಬಿಣಗಾ ಕೋಮಾರಪಂಥ ಘಟಕಕ್ಕೆ ಒಳಪಡುವ ಕೋಮಾರಪಂಥ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಯ ನಕಲು ಪ್ರತಿಯೊಂದಿಗೆ ಕೋಮಾರಪಂಥ ಸಮಾಜ ಬಿಣಗಾ ಘಟಕಕ್ಕೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಎಸ್ಸೆಸ್ಸಲ್ಲಿ, ಪಿಯುಸಿ ಎರಡನೇ ವರ್ಷದಲ್ಲಿ 60% ಗಿಂತ ಹೆಚ್ಚು ಅಂಕ ಪಡೆದಿರಬೆಕು. ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರನ್ನು ಪುರಸ್ಕರಿಸಲಾಗುವುದು. ಅರ್ಜಿದಾರರು ಕೊಮಾರಪಂಥ ಸಮಾಜ ಬಿಣಗಾ ಘಟಕಕ್ಕೆ ಒಳಪಟ್ಟವರಾಗಿರಬೆಕು.
ಅರ್ಜಿ ಸಲ್ಲಿಸಲು ಜ. 10 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗೆ ಸಮಾಜದ ಅಧ್ಯಕ್ಷ ಬಿ. ಬಿ. ನಾಯ್ಕ (9945025136), ಕಾರ್ಯದರ್ಶಿ ಚೇತನ ಎಸ್ ಮ್ಹಾಳಸೇಕರ್ (9986908278)ಯನ್ನು ಸಂಪರ್ಕಿಸಬಹುದು.