ಶಿರಸಿ: ಶಂಕರಭಗವತ್ಪಾದರ ಅವತಾರವೆಂದೇ ಲೋಕವಿಖ್ಯಾತರಾದ ಕಾಂಚೀಕಾಮಕೋಟಿಯ ಅರವತ್ತೆಂಟನೆಯ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ಮಹಾಸ್ವಾಮಿಗಳ ಆರಾಧನೆಯಲ್ಲಿ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಪಾಲ್ಗೊಂಡರು.
ಕಂಚಿಯ ಶ್ರೀ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ ನಡೆದ ಆರಾಧನೆಯಲ್ಲಿ ಶ್ರೀಗಳವರು ಪರಮಾಚಾರ್ಯರ ಅಧಿಷ್ಠಾನಕ್ಕೆ ಪೂಜೆಯನ್ನು ಸಲ್ಲಿಸಿದರು. ಕಾಸರಗೋಡಿನ ಎಡನೀರು ಮಠದ ಸ್ವಾಮಿಗಳು ಬೇರೆ ಬೇರೆ ರಾಜ್ಯದ ಅನೇಕ ಸ್ವಾಮೀಜಿಗಳು ಕೂಡ ಭಾಗವಹಿಸಿದ್ದರು.