• first
  second
  third
  previous arrow
  next arrow
 • ಹಳೆಯ ವಿದ್ಯಾರ್ಥಿಗಳಿಂದ ಶಾಲೆಗೆ ಲಕ್ಷ ರೂ. ಮೌಲ್ಯದ ವಸ್ತು ದೇಣಿಗೆ

  300x250 AD

  ಶಿರಸಿ: ತಾಲೂಕಿನ 3 ನೇ ನಂಬರ್ ಶಾಲೆಯ 1977 ನೇ ಬ್ಯಾಚ್ ನ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಸೇವೆ ಮಾಡಬೇಕೆಂಬ ಉದ್ದೇಶದಿಂದ ಶಾಲೆಗೆ ಟಿ.ವಿ, ಲ್ಯಾಪ್ ಟಾಪ್, ನೋಟಿಸ್ ಬೋರ್ಡ , ಗ್ರೀನ್ ಬೋರ್ಡ, ಮ್ಯಾಪ್ ,ಗ್ಲೋಬ್,ಶಾಲೆಯ ಹೆಸರಿನ ಫಲಕ ಹಾಗೂ ಶಾಲೆಯ ಕಂಪ್ಯೂಟರ್ ರೂಮಿನ ನೆಲಕ್ಕೆ ಮ್ಯಾಟ್ ಸೇರಿದಂತೆ ಲಕ್ಷ ರೂ ಮೌಲ್ಯದ ವಸ್ತುಗಳನ್ನು ದೇಣಿಗೆ ನೀಡಿದ್ದಾರೆ.

  ಕಾರ್ಯಕ್ರಮದಲ್ಲಿ ಬಿ. ಇ. ಓ ಎಮ್.ಎಸ್.ಹೆಗಡೆ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಪಟಗಾರ, ಶಾಲೆಯ ನಿವೃತ್ತ ಮುಖ್ಯಧ್ಯಾಪಕರು, ಶಿಕ್ಷಣ ಸಂಯೋಜಕರು ಆದ ಪ್ರಭಾಕರ ಜೋಗಳೆಕರ, ಮಾರುಕಟ್ಟೆ ಠಾಣೆಯ ಉಪನಿರಿಕ್ಷಕರು ಆದ ಭೀಮಶಂಕರ್ ಸಿನ್ನೂರ್,ಶಾಲೆಯ ಮುಖ್ಯಧ್ಯಾಪಕರಾದ ಶಶಿಕಲಾ ನಾಯ್ಕ್, ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಧಾರವಾಡ ನವೋದಯ ಗಣಿತ ಶಿಕ್ಷಕ ರಾಮದಾಸ ಪೈ, ಹಳೆಯ ವಿದ್ಯಾರ್ಥಿನಿ ಸಿದ್ದಾಪುರ ಬಾಲಕಿಯರ ಪ್ರೌಢಶಾಲೆಯ ಮುಖ್ಯದ್ಯಪಕಿ ನಯನಾ ನಾಯಕ ಇದ್ದರು.

  ಶಿವಶಂಕರ ಸಿನ್ನೂರ್ ಮಾತನಾಡಿ ಸರಕಾರಿ ಶಾಲೆಯಲ್ಲಿ ಕಲಿತರೆ ಸರಕಾರಿ ಉದ್ಯೋಗ ಗ್ಯಾರಂಟಿ ಅದ್ಕೆ ನಾನೇ ಉದಾರಹಣೆ ಎಂದರು. ಸುರೇಶ ಪಟಗಾರ ಮಾತನಾಡಿ ಇಂತಹ ಒಳ್ಳೆಯ ಕೆಲಸ ಮಾಡುತ್ತಿರುವ ಹಳೆಯ ವಿದ್ಯಾರ್ಥಿಗಳಿಗೆ ಎಲ್ಲಾ ಶಿಕ್ಷಕರಿಂದ ನಮನ ಎಂದರು, ಬಿ. ಇ. ಓ ಮಾತನಾಡಿ ಎಲ್ಲಾ ಬ್ಯಾಚಿನವರು ಇಂತಹ ಉತ್ತಮ ಕೆಲಸ ಮಾಡಿದರೆ ವಿಜಯನಗರ ಸಾಮ್ರಾಜ್ಯ ಕಟ್ಟಬಹುದು ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು, ಸರಕಾರಿ ಶಾಲೆ, ಖಾಸಗಿ ಶಾಲೆ ಎಂಬ ಭೇದಭಾವ ಬರಬಾರದು ಎಂದರು,

  300x250 AD

  ಝೆವಿಯರ್ ನಿರೂಪಣೆ, ಭಾರತಿ ಹೆಗಡೆ ಮತ್ತು ಗೀತಾ ಜೋಶಿ ಪ್ರಾರ್ಥನೆ ಮಾಡಿದರು, ಕಲಿಸಿದ ಗುರುಗಳಾದ ಗೋವಿಂದ ನಾಯ್ಕ್ ಪ್ರಭಾಕರ ಜೋಗಳೆಕರ್ ಅವರನ್ನು ಸನ್ಮಾನಿಸಿದರು. ಗಿರೀಶ ಪಟಗಾರ ಪ್ರಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.

  Share This
  300x250 AD
  300x250 AD
  300x250 AD
  Back to top