ನವದೆಹಲಿ: ಉತ್ತರ ಪ್ರದೇಶ ಸರ್ಕಾರ ಬುಧವಾರ ಝಾನ್ಸಿ ರೈಲು ನಿಲ್ದಾಣವನ್ನು ವೀರಾಂಗಣ ಲಕ್ಷ್ಮೀಬಾಯಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲು ಅಧಿಸೂಚನೆ ಹೊರಡಿಸಿದೆ. ಈ ಹಿಂದೆ ಝಾನ್ಸಿ ರೈಲು ನಿಲ್ದಾಣದ ಹೆಸರನ್ನು ಬದಲಾಯಿಸುವ ಪ್ರಸ್ತಾವನೆಯನ್ನು ಕೇಂದ್ರ ಒಪ್ಪಿಕೊಂಡಿತ್ತು.
ಕೆಲ ವರ್ಷಗಳ ಹಿಂದೆ ನಗರದಲ್ಲಿ ನಡೆದ ರೈಲ್ವೆ ಸಭೆಯಲ್ಲಿ ಬಿಜೆಪಿಯ ರಾಜ್ಯಸಭಾ ಸಂಸದ ಪ್ರಭಾತ್ ಝಾ ಸೇರಿದಂತೆ ಹಲವು ಸ್ಥಳೀಯ ಜನಪ್ರತಿನಿಧಿಗಳು ಝಾನ್ಸಿ ನಿಲ್ದಾಣಕ್ಕೆ ರಾಣಿ ಲಕ್ಷ್ಮೀಬಾಯಿ ಹೆಸರಿಡುವಂತೆ ಒತ್ತಾಯಿಸಿದ್ದರು.
ಝಾನ್ಸಿ ಸಂಸದ ಅನುರಾಗ್ ಶರ್ಮಾ ಮಾತನಾಡಿ, ಇದು ಬುಂದೇಲ್‌ಖAಡದ ಜನತೆಗೆ ಹೆಮ್ಮೆಯ ವಿಷಯವಾಗಿದೆ, ಇದು ಈ ಪ್ರದೇಶಕ್ಕೆ ಆರ್ಥಿಕ ಲಾಭವನ್ನು ನೀಡುತ್ತದೆ ಎಂದು ಹೇಳಿದರು. ಇಲ್ಲಿ ಪ್ರವಾಸೋದ್ಯಮದ ಸಾಧ್ಯತೆಗಳು ಹೆಚ್ಚಾಗಲಿವೆ ಎಂದರು.