ಸಿದ್ದಾಪುರ: ತಾಲೂಕಿನ ನಿಡಗೋಡ ಬಳಿ ಪೋಲೀಸ್ ಜೀಪ್ ಪಲ್ಟಿಯಾಗಿ ಚಾಲಕನಿಗೆ ತೀವ್ರತರವಾದ ಗಾಯಗಳಾಗಿದ್ದು, ಜೀಪಿನಲ್ಲಿದ್ದ ಪಿಎಸೈ ಪ್ರಣಾಪಾಯದಿಂದ ಪಾರಾಗಿದ್ದಾರೆ.
ಶಿರಸಿಯಲ್ಲಿ ನಡೆಯುತ್ತಿರುವ ಪೋಲೀಸ್ ದೈಹಿಕ ಪರೀಕ್ಷೆಗೆ ಬರುವ ವೇಳೆ ಎದುರಿನಿಂದ ಅತಿವೇಗವಾಗಿ ಬಂದ ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಯಲ್ಲಿ ತೀವ್ರ ಗಾಯಗೊಂಡ ಯಲ್ಲಪ್ಪ ಕಾಗವಾಡರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ಪಿಎಸೈ ಮಹಾಂತೇಶ ಕುಂಬಾರರಿಗೆ ಸಿದ್ದಾಪುರ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.