ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಮತ್ತು ಅನಂತನಾಗ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ವಿಭಿನ್ನ ಎನ್‌ಕೌಂಟರ್‌ಗಳಲ್ಲಿ ಇಬ್ಬರು ಪಾಕಿಸ್ಥಾನಿ ಪ್ರಜೆಗಳು ಸೇರಿದಂತೆ ಆರು ಜೆಇಎಂ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ.
ಪೊಲೀಸ್ ವಕ್ತಾರರ ಪ್ರಕಾರ, ನಿನ್ನೆ ಸಂಜೆ ಭದ್ರತಾ ಪಡೆಗಳು ಕುಲ್ಗಾಮ್ ಜಿಲ್ಲೆಯ ಮಿರ್ಹಾಮಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಎನ್‌ಕೌಂಟರ್ ಸಂಭವಿಸಿದೆ ಮತ್ತು ಅಡಗಿಕೊಂಡಿದ್ದ ಭಯೋತ್ಪಾದಕರಿಂದ ಭಾರೀ ಗುಂಡಿನ ದಾಳಿ ನಡೆದಿದೆ. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದಾಗ ಗುಂಡಿನ ದಾಳಿಯಲ್ಲಿ ಇಬ್ಬರು ಸ್ಥಳೀಯ ಭಯೋತ್ಪಾದಕರು ಮತ್ತು ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಸಾವನ್ನಪ್ಪಿದ್ದಾನೆ. ಹತ್ಯೆಗೀಡಾದ ಭಯೋತ್ಪಾದಕರು ಜೈಷ್-ಎ-ಮುಹಮ್ಮದ್ (ಜೆಇಎಂ) ಉಗ್ರಗಾಮಿ ಸಂಘಟನೆಯೊAದಿಗೆ ಸಂಬAಧ ಹೊಂದಿದ್ದ. ಎನ್‌ಕೌಂಟರ್ ಸ್ಥಳದಿಂದ ಒಂದು ಎಂ4 ಮತ್ತು ಎರಡು ಎಕೆ 47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಾಗೂ ಅನಂತ್‌ನಾಗ್ ಜಿಲ್ಲೆಯ ನೌಗಾಮ್ ಪ್ರದೇಶದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಇನ್ನೂ ಮೂವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದಾರೆ. ಗುಂಡಿನ ಚಕಮಕಿ ವೇಳೆ ಓರ್ವ ಪೊಲೀಸ್ ಪೇದೆಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಭಯೋತ್ಪಾದಕರು ಜೆಇಎಂ ಸಂಘಟನೆಗೆ ಸೇರಿದವನು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್‌ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ (ಕಾಶ್ಮೀರ ವಲಯ) ವಿಜಯ್ ಕುಮಾರ್ ಅವರು ಕಾರ್ಯಾಚರಣೆಯನ್ನು ದೊಡ್ಡ ಯಶಸ್ಸು ಎಂದು ಬಣ್ಣಿಸಿದ್ದಾರೆ.