ಕಾರವಾರ: ಸಾರ್ವಜನಿಕರಿಗೆ ಬಹುಮಾನ ಪಡೆಯಲು ಸಾಮಾಜಿಕ ಮಾಧ್ಯಮ ಸ್ಪರ್ಧೆಯೊಂದನ್ನು ಜಿಲ್ಲಾ ಪಂಚಾಯತಿ ಆಯೋಜಿಸಿದೆ.
ಜಿಲ್ಲೆಯಲ್ಲಿ ಸ್ವಚ್ಚ ಭಾರತ ಮಿಷನ್ (ಗ್ರಾಮೀಣ) ಯೋಜನೆಯಿಂದ ಆಗಿರುವ ಅನುಕೂಲತೆಗಳ ಬಗ್ಗೆ ಒಂದು ನಿಮಿಷದ ವಿಡಿಯೋ ಹಾಗೂ ನರೇಗಾ ಯೋಜನೆಯಡಿ ಅನುಷ್ಠಾನಿಸಲಾದ ಕಾಮಗಾರಿಗಳ ಪೋಟೋವನ್ನು @ZpKarwarಗೆ ಟ್ಯಾಗ್ ಮಾಡಬೇಕು. ಹೆಚ್ಚು ಲೈಕ್ಸ್ ಪಡೆದ ಟ್ವೀಟ್ ಗೆ ಬಹುಮಾನ ನೀಡಲಾಗುತ್ತದೆ.
ಈ ಬಗ್ಗೆ ಜಿಲ್ಲಾ ಪಂಚಾಯತಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ತಿಳಿಸಲಾಗಿದೆ.