
ಮುಂಡಗೋಡ: ನಾವು ತಾಯಿಯ ಹೊಟ್ಟೆಯಿಂದ ಹುಟ್ಟುವಾಗ ಏನೂ ತಂದಿಲ್ಲ ಸಾಯುವಾಗಲೂ ಏನನ್ನೂ ಒಯ್ಯುವುದಿಲ್ಲ, ಭೂಮಿಗೆ ಬಂದು ಹೋಗುವ ನಡುವೆ ನಾವೇನು ಸಾಧನೆ ಮಾಡಿದ್ದೇವೆ ಎಂಬುದು ಮುಖ್ಯ ಬಡವರಿಗೆ ನನ್ನ ಕೈಲಾದ ಸಹಾಯ ನಾನು ಮಾಡುತ್ತಿದ್ದೇನೆ ಎಂದು ಕಾರ್ಮಿಕ ಹಾಗೂ ರೇಷನ್ ಕಿಟ್‍ಗಳನ್ನು ಶನಿವಾರ ಸಾಂಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಅವರು ತಾಲೂಕಿನ ಉಗ್ಗಿನಕೇರಿ ಗ್ರಾಮದಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಫಲಾನುಭವಿಗಳಿಗೆಕೇತಿಕವಾಗಿ ವಿತರಿಸಿ ಮಾತನಾಡಿದರು.
ಕಳೆದ ನಾಲ್ಕು ಬಾರಿಯ ಚುನಾವಣೆಗಳಲ್ಲಿ ತಾಲೂಕಿನ ಮತದಾರರು ಆಶೀರ್ವಾದ ಮಾಡಿದ್ದಾರೆ. ಅವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಜಾತಿ, ಮತ, ಪಕ್ಷ, ಪಂಗಡ, ಧರ್ಮ ಎನ್ನದೆ ಯಾರಿಗೂ ತಪ್ಪದಂತೆ ಎಲ್ಲರಿಗೂ ಕಿಟ್ ತಲುಪಿಸಲಾಗುವುದು. ಕಳೆದ ವರ್ಷವೂ ಕೋವಿಡ್ ಸಮಯದಲ್ಲಿ ಬಡವರಿಗೆ ರೇಷನ್ ಕಿಟ್‍ಗಳನ್ನು ವಿತರಿಸಲಾಗಿತ್ತು. ಈ ಬಾರಿಯೂ ಕೋವಿಡ್‍ನಿಂದ ಬಹಳಷ್ಟು ಬಡವರು ಕಷ್ಟ ಅನುಭವಿಸುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಬಹಳಷ್ಟು ಶ್ರಮಪಟ್ಟು ಫಲಾನುಭವಿಗಳ ಮನೆಗಳಿಗೆ ಕಿಟ್‍ಗಳ ಚೀಟಿಗಳನ್ನು ಮುಟ್ಟಿಸಿದ್ದಾರೆ. ಎಂದರು. ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ ವೋಟ್ ಪಡೆದ ಮೇಲೆ ಕೃತಜ್ಞತೆ ಇರುವುದು ಮುಖ್ಯ. ಆ ಭಾವನೆಯಿಂದ ಸಚಿವರು ಮತದಾರರ ಋಣ ತೀರಿಸುತ್ತಿದ್ದಾರೆ ಎಂದರು.
ಮೈನಳ್ಳಿ, ನಂದಿಕಟ್ಟಾ ಮತ್ತು ಇಂದೂರ ಗ್ರಾಮಗಳಲ್ಲಿ ಕಿಟ್‍ಗಳನ್ನು ವಿತರಿಸಿದರು.
ಜಿ.ಪಂ.ಸದಸ್ಯ ರವಿಗೌಡ ಪಾಟೀಲ, ವಿವೇಕ ಹೆಬ್ಬಾರ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗ್ರಾ.ಪಂ.ಅಧ್ಯಕ್ಷ ಬಸಯ್ಯ ನಡುವಿನಮನಿ, ದೇವು ಪಾಟೀಲ, ತುಕಾರಾಮ ಇಂಗಳೆ, ಕೆಂಜೋಡಿ ಗಲಬಿ, ಗಣೇಶ ಶಿರಾಲಿ, ಸುನೀಲ ವೆರ್ಣೇಕರ, ಭರತರಾಜ ಹದಳಗಿ, ಮಂಜುನಾಥ ಶೇಟ್ ಮುಂತಾದವರು ಉಪಸ್ಥಿತರಿದ್ದರು.