• first
  second
  third
  previous arrow
  next arrow
 • ಬಂದೂಕು ಪರವಾನಗಿ ನವೀಕರಣಕ್ಕೆ ವಿಳಂಬವಿಲ್ಲ; ಎಸ್ಪಿ ಸುಮನ್ ಪೆನ್ನೆಕರ್

  300x250 AD

  ಶಿರಸಿ: ಇತ್ತೀಚೆಗೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೆಣ್ಣುಮಕ್ಕಳ ಅಪಹರಣ ಹಾಗೂ ಮಾದಕ ವಸ್ತುಗಳ ಸಾಗಾಟ ಪ್ರಕರಣಗಳನ್ನು ಜಿಲ್ಲಾ ಪೊಲೀಸ್ ಗಂಭೀರವಾಗಿ ಪರಿಗಣಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಹೇಳಿದರು.

  ಅವರು ನಗರದ ಮಾರಿಕಾಂಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪೊಲೀಸ್ ಸಿಬ್ಬಂದಿಯ ಹುದ್ದೆಗಳ ನೇಮಕಾತಿ ಸಂಬಂಧಿಸಿದ ದೇಹದಾಡ್ಯ ಪರೀಕ್ಷೆಯನ್ನು ಬುಧವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು. ಅಪ್ರಾಪ್ತ ವಯಸ್ಕ ಮಕ್ಕಳು ನಾಪತ್ತೆ ಆದರೆ, ಅದನ್ನು ಅಪಹರಣ ಎಂದೇ ದಾಖಲಿಸಬೇಕಾಗುತ್ತದೆ. ಕೆಲ ಪ್ರಕರಣಗಳಲ್ಲಿ ಪೂರ್ವಯೋಜಿತ ಕೃತ್ಯಗಳೂ ಇರುತ್ತವೆ. ಆದರೆ, ಅಪ್ರಾಪ್ತ ಯುವತಿ ಇನ್ನೊಬ್ಬರ ಜೊತೆ ಹೋದಲ್ಲಿ ಅದನ್ನು ಅಪಹರಣ ಎಂದೇ ಪರಿಗಣಿಸಲಾಗುತ್ತದೆ. ನ್ಯಾಯಾಲಯದ ಆದೇಶ ಕೂಡ ಹಾಗೇ ಇದೆ. ಅಪರಹಣಕ್ಕೆ ಒಳಗಾದ ಮಕ್ಕಳು ಒಂದೆರಡು ದಿನದಲ್ಲಿ ಪತ್ತೆ ಆಗುತ್ತಿದ್ದಾರೆ. ಪಾಲಕರ ಬಳಿ ಅವರನ್ನೂ ಪೊಲೀಸ್ ಒಪ್ಪಿಸುತ್ತಿದೆ. ಆದರೆ ಇಂತಹ ಘಟನೆಗಳು ಮೊದಲಿನಿಂದಲೂ ನಡೆಯುತ್ತಿದೆಯಾದರೂ, ಇತ್ತೀಚಿನ ವರ್ಷಗಳಲ್ಲಿ ಸುಲಭದಲ್ಲಿ ಸಂಪರ್ಕ ಸಾಧ್ಯವಾಗುವ ಮಾಧ್ಯಮಗಳ ಬಳಕೆ ಇಂತಹ ಘಟನೆಗಳಿಗೆ ಕಾರಣ. ಈ ಕುರಿತು ಶಾಲಾ ಹಂತದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೂಡ ಮಾಡಲಾಗುತ್ತಿದೆ ಎಂದರು.

  ಇದೇ ರೀತಿ ಗಾಂಜಾ ಪ್ರಕರಣವನ್ನೂ ನಾವು ಗಂಭೀರವಾಗಿ ಪರಿಗಣಿಸಿದ್ದೇದ್ದು, ಸಾಗಾಟ ಮಾಡುವವರ ವಿರುದ್ದವೂ ಕಠಿಣ ಕ್ರಮ ಕೈಗೊಳ್ಳುಲಾಗುತ್ತಿದೆ. ಈಗಾಗಲೇ ಗೋಕರ್ಣ, ಹೊನ್ನಾವರದಲ್ಲೂ ಇಂಥ ಪ್ರಕರಣ ಬಯಲಿಗೆ ತಂದಿದ್ದೇವೆ. ಅಪಹರಣ ಹಾಗೂ ಗಾಂಜಾ ಸೇರಿದಂತೆ ಯಾವುದೇ ಮಾದಕ ದ್ರವ್ಯ ಸಾಗಾಟ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಸಿದೆ. ಶಾಲಾ ಕಾಲೇಜು ಹಂತದಲ್ಲೂ ಅಪರಾಧ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದೇವೆ. ಸೈಬರ್ ಕ್ರೈಮ್ ತಿಳುವಳಿಕೆ ಕೂಡ ನೀಡಲಾಗುತ್ತದೆ ಎಂದರು.

  300x250 AD

  ಬಂದೂಕುಗಳ ಪುನರ್ ನವೀಕರಣಕ್ಕೆ  ಪೊಲೀಸ್ ಇಲಾಖೆಯಿಂದ ವಿಳಂಬವಾಗುತ್ತಿಲ್ಲ. ಹೊಸ ಬಂದೂಕಿಗೆ ಮಾತ್ರ ಪರವಾನಗಿ ಬೇಕಿದೆ. ಬೆಳೆ ರಕ್ಷಣೆಯ ಉದ್ದೇಶದ ಬಂದೂಕು ಪರವಾನಗಿ ನವೀಕರಣಕ್ಕೆ ಎಂದಿಗೂ ವಿಳಂಬ ಮಾಡುವುದಿಲ್ಲ ಎಂದ ಅವರು, ಕರಾವಳಿ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಬರಲು ಯಾರೂ ಮುಂದಾಗುತ್ತಿಲ್ಲ. ಇಲಾಖೆಯಲ್ಲಿ ಸ್ಥಳೀಯರಿದ್ದರೆ ಜನರ ಸ್ಪಂದನೆಗೂ ಅನುಕೂಲ ಆಗಲಿದೆ. ಈ ಜಿಲ್ಲೆಯ ಜನರು ಹೆಚ್ಚು ಪೊಲೀಸ್ ಇಲಾಖೆ ಸೇರ್ಪಡೆ ಆಗುವಂತೆ ಮನವಿ ಮಾಡುತ್ತದೆ ಎಂದರು. ಖಾಲಿ ಇರುವ ಸಿಬ್ಬಂದಿ ಹುದ್ದೆ ತುಂಬುವ ಪ್ರಕ್ರಿಯೆ ನಡೆಯುತ್ತಿದೆ.‌ ಸದ್ಯ 120 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, 560 ಅಭ್ಯರ್ಥಿಗಳು ಬಂದಿದ್ದಾರೆ ಎಂದರು.

  Share This
  300x250 AD
  300x250 AD
  300x250 AD
  Back to top