ಶಿರಸಿ: ಪ್ರಾಪಂಚಿಕ ಒಳಿತಿನ ಉದ್ದೇಶದಿಂದ ಸಂಗೀತ ಮತ್ತು ನಾಟ್ಯ ಪ್ರಿಯ ದೇವರಾದ ಗೋಳಿಯ ಶ್ರೀ ಸಿದ್ಧಿವಿನಾಯಕ ದೇವರ ಸಾನ್ನಿಧ್ಯದಲ್ಲಿ ಜ.1ರಂದು ಸಂಜೆ 5 ಗಂಟೆಗೆ ನಾದಪೂಜಾ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಗಾಯಕ ವಿನಾಯಕ ಮುತ್ಮುರ್ಡು ಹೇಳಿದರು.
ಇಲ್ಲಿನ ಸಾಮ್ರಾಟ್ ಸಭಾಭವನದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾಹಿತಿ ನೀಡಿದ ಅವರು, ಇಂದು ಇಡೀ ಜಗತ್ತು ಕೋವಿಡ್ ಹಾಗೂ ಇತರ ಮಾರಣಂತಿಕ ಖಾಯಿಲೆಗಳಿಂದ ತತ್ತರಿಸಿದೆ. ಅಶಾಂತಿ ಹೆಚ್ಚುತ್ತಿದೆ. ಇದರ ನಿವಾರಣೆಯ ಉದ್ದೇಶದಿಂದ ಭಗವಂತನ ಸಾನ್ನಿಧ್ಯದಲ್ಲಿ ಸಂಗೀತ ಸೇವೆ ನಡೆಸಲಾಗುತಿದೆ. ಸುಷಿರ ಮತ್ತು ತಾರಷಡ್ಜ ಸಂಘಟನೆಗಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜುಗಲ್ ಬಂದಿಯ ಜತೆಗೆ ಬಾನ್ಸುರಿಯಲ್ಲಿ ಪ್ರಕಾಶ ಹೆಗಡೆ ಕಲ್ಲಾರೆಮನೆ, ತಬಲಾದಲ್ಲಿ ಪಂ.ಸಾತಲಿಂಗಪ್ಪ ದೇಸಾಯಿ ಕಲ್ಲೂರು, ಶ್ರೀವತ್ಸ ಶರ್ಮ ಉಡುಪಿ, ಹಾರ್ಮೋನಿಯಂದಲ್ಲಿ ಹೇಮಂತ ಭಾಗವತ ಮಂಗಳೂರು, ಅಜಯ ಹೆಗಡೆ ವರ್ಗಾಸರ, ತಾಳದಲ್ಲಿ ವಿಶ್ವನಾಥ ಹೆಗಡೆ ದಾಸನಕೊಪ್ಪ ಪಾಲ್ಗೊಳ್ಳುವರು. ಗಾಯನದಲ್ಲಿ ವಿನಾಯಕ ಮುತ್ಮುರ್ಡು, ಸುಪ್ರಿಯಾ ಹೆಗಡೆ ಹಿತ್ಲಳ್ಳಿ ಭಾಗವಹಿಸುವರು ಎಂದರು.