• Slide
    Slide
    Slide
    previous arrow
    next arrow
  • ಮುಖ್ಯೋಪಾಧ್ಯಾಯರ ಎದುರಲ್ಲೇ ಶಿಕ್ಷಕನ ಮೇಲೆ ಸಹಶಿಕ್ಷಕನಿಂದ ಹಲ್ಲೆ

    300x250 AD

    ಮುಂಡಗೋಡ: ತಾಲೂಕಿನ ಹುನಗುಂದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರೊಬ್ಬರು ತಮ್ಮ ಶಾಲೆಯ ಸಹ ಶಿಕ್ಷಕರೊಬ್ಬರ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಸಿನಿಮೀಯ ರೀತಿಯ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದ್ದು ಗ್ರಾಮಸ್ಥರನ್ನು ತಬ್ಬಿಬ್ಬುಗೊಳಿಸಿದೆ.

    ಇಂಗ್ಲೀಷ್ ಸಹ ಶಿಕ್ಷಕ ತುಳಜಪ್ಪ ಹುಮನಾಬಾದಿ ಹಲ್ಲೆಗೊಳಗಾದ ಅಮಾಯಕ ಶಿಕ್ಷಕ. ಹಿಂದಿ ಶಿಕ್ಷಕ ರಮೇಶ ಅಂಬಿಗೇರ ಹಲ್ಲೆ ಮಾಡಿದ ಶಿಕ್ಷಕರಾಗಿದ್ದಾರೆ. ಘಟನೆಯ ಕುರಿತು ಮಾಹಿತಿ ನೀಡಿದ ತುಳಜಪ್ಪ ಹುಮನಾಬಾದಿ, ತಮಗೆ ಸಂಭಂದಿಸಿದ ಕ್ರೋಢೀಕೃತ ಅಂಕಪಟ್ಟಿಗಳನ್ನು ರಮೇಶ ಅಂಬಿಗೇರ ಹರಿದು ಹಾಕಿದ ವಿಷಯ ತುಳಜಪ್ಪ ಹುಮನಾಬಾದಿ ಅವರಿಗೆ ಡಿ.18ರಂದು ತಿಳಿದಿದೆ. ಈ ವಿಷಯದ ಬಗ್ಗೆ ಅವರು ಮುಖ್ಯೋಪಾಧ್ಯಾಯಿನಿ ಅಕ್ಕಮ್ಮ ಗಾಣಿಗೇರ ಅವರಿಗೆ ಪತ್ರ ಬರೆದಿದ್ದರು. ವಿಷಯ ಚರ್ಚಿಸಲು ಮುಖ್ಯೋಪಾಧ್ಯಾಯರು ಎಲ್ಲ ಶಿಕ್ಷಕರನ್ನು ಕರೆಯಿಸಿ ಸಭೆ ನಡೆಸಿದ್ದರು. ನೀವು ಶಾಲೆಗೆ ಸರಿಯಾಗಿ ಬರುವುದಿಲ್ಲವೆಂದು ನನ್ನನ್ನು ಕೇಳಿದಾಗ ನಾನು ಹೌದು ಎಂದು ಒಪ್ಪಿಕೊಂಡೆನು. ಅಷ್ಟಕ್ಕೇ ಅವರು ಎದ್ದು ಬಂದು ಅವಾಚ್ಯ ಶಬ್ದಗಳಿಂದ ನನ್ನನ್ನು ಮತ್ತು ಮುಖ್ಯೋಪಾಧ್ಯಾಯರನ್ನು ಬೈಯುವುದಲ್ಲದೆ ಟೇಬಲ್ ಮೇಲೆ ಇರುವ ಗ್ಲಾಸ್‍ನ ಪೇಪರ್ ವೇಟ್ ಕೈಯಲ್ಲಿ ತೆಗೆದುಕೊಂಡು ನನ್ನ ಕಡೆ ಬೀಸಿದರು. ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅದು ಬಂದು ನನ್ನ ಕೈಗೆ ಬಡಿಯಿತು. ಎಲ್ಲ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಬಂದು ಅವರನ್ನು ಹಿಡಿದುಕೊಂಡರು. ನಮಗೆ ನೀವೆಲ್ಲ ಸಂಬಂಧವಿಲ್ಲ ನಾನು ನಿಮ್ಮ ಮಾತು ಕೇಳುವುದಿಲ್ಲ ಎಂದು ಯಾರ ಮಾತಿನತ್ತ ಗಮನ ಕೊಡಲಿಲ್ಲ.

    300x250 AD

    ಈ ಹಿಂದೆಯೂ ಶಿಕ್ಷಕ ರಮೇಶ ಅಂಬಿಗೇರ ಮುಖ್ಯೋಪಾಧ್ಯಾಯರಿಗೆ ಏಕ ವಚನದಲ್ಲಿ ಮಾತನಾಡಿದ್ದರು. ನಾಗರಾಜ ಅರ್ಕಸಾಲಿ ಮತ್ತು ಕೃಷ್ಣಾ ಗುಜಮಾಗಡಿ ಎಂಬ ಶಿಕ್ಷಕರ ಮೇಲೂ ಹಲ್ಲೆ ನಡೆಸಿದ್ದರು. ಪೊಲೀಸ್ ಠಾಣೆಯಲ್ಲಿ ಅದು ಹೇಗೆ ದೂರು ನೀಡುತ್ತೀರೋ ನಾನು ನೋಡುತ್ತೇನೆ ಎಂದು ಗದರಿಸುತ್ತಾರೆ. ಗಾಯಗೊಂಡ ನಾನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದೇನೆ ಎಂದು ತುಳಜಪ್ಪ ಹುಮನಾಬಾದಿ ತಿಳಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top