• first
    second
    third
    previous arrow
    next arrow
  • ಜೀವವೈವಿಧ್ಯ ಅಧ್ಯಕ್ಷ ಸ್ಥಾನದಿಂದ ಅನಂತ ಹೆಗಡೆ ಅಶೀಸರ ಮುಕ್ತ

    300x250 AD

    ಬೆಂಗಳೂರು: ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಅಶೀಸರ ಅಧ್ಯಕ್ಷ ಸ್ಥಾನದಿಂದ ಮುಕ್ತರಾಗಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕಳೆದ ಎರಡು ವರ್ಷಗಳಿಂದ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿ 2021 ಡಿಸೆಂಬರ್ ತಿಂಗಳಲ್ಲಿ ಮುಗಿಯುತ್ತಿದೆ. ಹೀಗಾಗಿ ನಾನು ಈ ಜವಾಬ್ದಾರಿಯಿಂದ ಮುಕ್ತನಾಗುತ್ತಿದ್ದೇನೆ. ಈ ಅವಧಿಯಲ್ಲಿ ಸಹಕಾರ ನೀಡಿದ ಸನ್ಮಾನ್ಯ ಮುಖ್ಯಮಂತ್ರಿಗಳು, ನಿಕಟಪೂರ್ವ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸರ್ಕಾರಕ್ಕೆ ಕೃತಜ್ಞತೆಗಳು, ಜೀವವೈವಿಧ್ಯ ಮಂಡಳಿಯ ಸದಸ್ಯರು,ಅಧಿಕಾರಿ, ಸಿಬ್ಬಂದಿಗೆ, ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸುವುದಾಗಿ ಅವರು ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಬಹುತೇಕ ನಿಗಮ ಮಂಡಳಿಯವರಿಂದ ರಾಜೀನಾಮೆ ಪತ್ರ ಪಡೆಯಲು ಪಕ್ಷದಿಂದ ಸೂಚಿಸಲಾಗಿದೆ ಎಂಬ ಮಾಹಿತಿ ‘e – ಉತ್ತರ ಕನ್ನಡ’ಕ್ಕೆ ಲಭಿಸಿದೆ.

    300x250 AD

    ರಾಜೀನಾಮೆ ಸಾಧ್ಯತೆ ಕುರಿತು ಈ ಮೊದಲೇ ವರದಿ ಮಾಡಿತ್ತು ‘e – ಉತ್ತರ ಕನ್ನಡ’:
    ಜೀವ ವೈವಿಧ್ಯ ಮಂಡಳಿಗೆ ಅನಂತ ಅಶೀಸರ ರಾಜೀನಾಮೆ ನೀಡುವ ಸಾಧ್ಯತೆ ಇದೆಯೆಂದು ನ.29 ರಂದು ‘e – ಉತ್ತರ ಕನ್ನಡ’ ವರದಿ ಮಾಡಿತ್ತು. ಆ ಸುದ್ದಿಯ ಲಿಂಕ್ ಇಲ್ಲಿದೆ. (https://euttarakannada.in/?p=13950) ಇದೀಗ ಅನಂತ ಅಶೀಸರ ಅಧ್ಯಕ್ಷ ಸ್ಥಾನದಿಂದ ಮುಕ್ತರಾಗುವ ಮೂಲಕ ಆ ಸುದ್ದಿಗೆ ಪುಷ್ಠಿ ನೀಡಿದಂತಾಗಿದೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಹಾಗಾಗಿ ಮುಂದಿನ ಚಟುವಟಿಕೆಗಳನ್ನು ಊಹಿಸುವುದು ಕಷ್ಟಸಾಧ್ಯ.

    Share This
    300x250 AD
    300x250 AD
    300x250 AD
    Back to top