ಶಿರಸಿ: ಕಲೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ನೀರ್ನಳ್ಳಿ ಮಾಧ್ಯಮಿಕ ಶಿಕ್ಷಣ ವಿದ್ಯಾಲಯದ ಮುಖ್ಯಾಧ್ಯಾಪಕ ಕಿಶೋರ ಅವರಿಗೆ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಾಧನ ಸಂಶೋಧಕ ಪ್ರಶಸ್ತಿ ಘೋಷಿಸಿದೆ.
ಡಿ.29 ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡುವುದಾಗಿ ಪರಿಷತ್ ತಿಳಿಸಿದೆ.
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನ, ವಿಶ್ವ ಮಾನವ ದಿನಾಚರಣೆ ಹಾಗೂ ಎಚ್. ನರಸಿಂಹಯ್ಯ ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ.
ನಾಡಿನ ಕಲೆ ಸಂಗೀತ ಸಾಹಿತ್ಯ ವಿಜ್ಞಾನ ಜನಪದ ಸಂಸ್ಕೃತಿ ಮತ್ತು ಪರಿಸರ ಚಿಂತನೆ ವೈಜ್ಞಾನಿಕ ಲೇಖನ ಚಿಂತನೆಗಳು ದೃಶ್ಯಕಾವ್ಯ, ಸಂಯೋಜನೆ ಮತ್ತು ಖಗೋಳ ವಿಶ್ಮಯಗಳ ಛಾಯಾ ದಾಖಲೆ ಗ್ರಹಣಗಳ ಬಗ್ಗೆ ಅರಿವು ಮೂಡಿಸುವಲ್ಲಿ ಕಾರ್ಯಸಾಧನೆ ಮಾಡಿದವರನ್ನು ಪರಿಣತ್ ಗುರುತಿಸುವ ಕೆಲಸ ಮಾಡುತ್ತಿದೆ. ಇದೇ ವೇಳೆ ರಾಜ್ಯದ 37 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲೇಕಲ್ ನಟರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.