eUK ವಿಶೇಷ: ಮನುಷ್ಯನಿಗೆ ಎಷ್ಟಿದ್ದರೂ ಸಹ ನೋಡಿದ ಕೂಡಲೇ ಮತ್ತೆ ಮತ್ತೆ ಬೇಕೆನಿಸುವ ವಸ್ತುಗಳಲ್ಲಿ ಬಟ್ಟೆ ಬಹುತೇಕ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಅದೊಂದು ಕಾಲವಿತ್ತು. ವರ್ಷದ ಹೊಸ ಹಬ್ಬಕ್ಕೊಂದು ಹೊಸ ಬಟ್ಟೆ ಎಂದು. ಆದರೆ ಕಾಲ ಕಳೆದಂತೆ ಇಂದು ಮನುಷ್ಯನ ಜೀವನಶೈಲಿ ಬದಲಾಗಿದೆ.
ಹೊಸತನದೊಂದಿಗೆ ಮತ್ತೆ ಸಿದ್ಧವಾಯ್ತು ‘ಗಂಧರ್ವ’:
ಇಂದು ಹೊಸತೆನಿಸುವುದು ನಾಳೆ ಮತ್ತೊಂದು ನೋಡಿದ ಕೂಡಲೇ ಹಳತಾಗುತ್ತದೆ. ಈ ಆಧುನಿಕ ಯುಗದಲ್ಲಿ ಬಟ್ಟೆಗಳ ತಯಾರಿಕೆಯಲ್ಲಂತೂ ದಿನಕ್ಕೊಂದು ಹೊಸ ತಂತ್ರಜ್ಞಾನ, ದಿನಕ್ಕೊಂದು ಟ್ರೆಂಡ್. ಟ್ರೆಂಡ್ ಗೆ ಸರಿ ಹೊಂದುವಂತೆ ಬಟ್ಟೆಗಳ ಖರೀದಿಗೆ ಮುಗಿಬೀಳುವ ಜನರಿಗೆ ಸರಿಯಾಗುವ ಡಿಸೈನ್, ಕಲರ್ ಹೊಂದಿಸುವುದೇ ಬಟ್ಟೆ ಉದ್ಯಮದಲ್ಲಿರುವವರ ಬಹುದೊಡ್ಡ ಸವಾಲು. ಅಂತಹ ಹೊಸ ಸವಾಲಿಗೆ ಹಳೆಯ ಅನುಭವದೊಂದಿಗೆ ಹೊಸ ವಿನ್ಯಾಸ, ಹೊಸ ದೃಷ್ಟಿ, ಹೊಸ ಪರಿಕಲ್ಪನೆಯೊಂದಿಗೆ ಸಿದ್ಧವಾಗಿದೆ ಶಿರಸಿಯ (ಚನ್ನಪಟ್ಟಣ) ಸಿಪಿ ಬಝಾರಿನಲ್ಲಿರುವ ಗಂಧರ್ವ ಕ್ಲಾಥ್ ಎಂಪೋರಿಯಮ್.
ಕಳೆದ 40 ವರ್ಷಗಳಿಂದ ಜಿಲ್ಲೆಯ ಬಹುತೇಕ ಜನರ ಅಚ್ಚುಮೆಚ್ಚಿನ ಬಟ್ಟೆ ಅಂಗಡಿ ಎನಿಸಿರುವ ಗಂಧರ್ವ ಕ್ಲಾಥ್ ಎಂಪೋರಿಯಂ ಇದೀಗ ನವೀನ ವಿನ್ಯಾಸದೊಂದಿಗೆ ಇಂದಿನ ಜನರ ಆಯ್ಕೆಗೆ ಹೊಂದುವಂತಹ ನವನವೀನ ಮಾದರಿಯ ಬಟ್ಟೆಗಳ ಆಯ್ಕೆಗಳೊಂದಿಗೆ ಸಿದ್ಧವಾಗಿದೆ. ಫ್ಯಾನ್ಸಿ ಸೀರೆಗಳು, ಸಿಲ್ಕ್ ಸಾರಿಗಳು, ಮಕ್ಕಳ ಉಡುಪು, ಪುರುಷರ ಫ್ಯಾಷನ್ ವೇರ್, ದಿನೋಪಯೋಗಿ ಚಾದರ, ಬ್ಲ್ಯಾಂಕೆಟ್, ಟವೆಲ್ ಗಳು ಸೇರಿದಂತೆ ಇನ್ನೂ ಹತ್ತು ಹಲವಾರು ಗಂಧರ್ವ ಕ್ಲಾಥ್ ಎಂಪೋರಿಯಂ ನ ಕಲೆಕ್ಷನ್ ಗಳಲ್ಲಿ ಜೋಪಾನವಾಗಿದೆ.
ಡಿ.27 ರಿಂದ ಜ.1 ರ ವರೆಗೆ ‘ಗಂಧರ್ವ ಹಬ್ಬ’:
ಹಬ್ಬಗಳೆಂದರೆ ಹೊಸ ಬಟ್ಟೆ ಸಹಜ. ಕ್ಯಾಲೆಂಡರ್ ವರ್ಷದ ಅಂತ್ಯದ ಹಿನ್ನಲೆಯಲ್ಲಿ ವಿವಿಧ ರೀತಿಯ ಬಟ್ಟೆಗಳ ಮೇಲೆ 50% ವರೆಗಿನ ರಿಯಾಯಿತಿಯೊಂದಿಗೆ ತನ್ನ ಗ್ರಾಹಕರಿಗಾಗಿ ‘ಗಂಧರ್ವ ಹಬ್ಬ’ ಡಿ.27 ರಿಂದ ಜ.1 ರ ವರೆಗೆ ವಿಫುಲ ಸಂಗ್ರಹದೊಂದಿಗೆ, ಜನರ ಬಯಕೆಯ ವಿನ್ಯಾಸದ ಬಟ್ಟೆಯೊಂದಿಗೆ ಸಿದ್ಧವಾಗಿ ತೆರೆದುನಿಂತಿದೆ.
ಗುಣಮಟ್ಟದಲ್ಲಿ ರಾಜಿಯಿಲ್ಲದೇ ಸ್ಪರ್ಧಾತ್ಮಕ ದರ:
ಜನರ ಆಯ್ಕೆಗೆ ಅನುಕೂಲವಾಗಿರುವಂತೆ ಸ್ಪರ್ಧಾತ್ಮಕ ದರದಲ್ಲಿ, ಗ್ರಾಹಕರ ವಿಶ್ವಾಸ ಗಳಿಸಲು ಅಗತ್ಯವಿರುವ ಅತ್ಯುತ್ತಮ ಗುಣಮಟ್ಟದ ವಸ್ತ್ರಗಳು ‘ಗಂಧರ್ವ ಕ್ಲಾಥ್ ಎಂಪೋರಿಯಂ’ನ ಎಂದಿನ ಆದ್ಯತೆ ಎನ್ನುವುದು ಕಳೆದ 40 ವರ್ಷಗಳಿಂದ ಗಳಿಸಿರುವ ಜನರ ವಿಶ್ವಾಸವೇ ಹೇಳುತ್ತದೆ.
₹1,000 ಮೇಲ್ಪಟ್ಟ ಬಟ್ಟೆ ಖರೀದಿಗೆ ಖಚಿತ ಉಡುಗೊರೆ & ಗಿಪ್ಟ್ ಕೂಪನ್:
ಇದೀಗ ನಡೆಯುತ್ತಿರುವ ‘ಗಂಧರ್ವ ಹಬ್ಬ’ದ ಪ್ರಯುಕ್ತ ₹1,000 ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ ಹಾಗು ಗಿಪ್ಟ್ ಕೂಪನ್ ಸಹ ನೀಡಲಾಗುತ್ತಿದ್ದು, ಇದು ಗ್ರಾಹಕರಿಗೆ ಹೆಚ್ಚು ಅನುಕೂಲಕರವಾಗಿದೆ.ಆಕರ್ಷಕ ರೇಷ್ಮೆ ಸೀರೆಗಳೂ ಸಹ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು, ಒಮ್ಮೆ ಸೀರೆಗಳನ್ನು ನೋಡಿದಲ್ಲಿ ಮಹಿಳೆಯರ ಮನ ಕರಗುವುದರಲ್ಲಿ ಎರಡು ಮಾತಿಲ್ಲ.
ಉತ್ತಮ ಗುಣಮಟ್ಟದ ಬಟ್ಟೆ ಖರೀದಿಗೆ ‘ಗಂಧರ್ವ ಕ್ಲಾಥ್ ಎಂಪೋರಿಯಂ’ ಸಿಪಿ ಬಝಾರ್ ಶಿರಸಿ ಇಲ್ಲಿಗೆ ಒಮ್ಮೆ ಬೆಟ್ಟಿ ನೀಡಿ ಅಥವಾ ಹೆಚ್ಚಿನ ಮಾಹಿತಿಗಾಗಿ 9060474725 ಸಂಪರ್ಕಿಸಬಹುದಾಗಿದೆ.