ಶಿರಸಿ/ಕುಮಟಾ: ಪ್ರಸ್ತುತ ಶಿರಸಿ ಸುತ್ತಮುತ್ತಲಿನ ನಾಗರೀಕ ಸೇವೆಯ ಕನಸು ಕಟ್ಟಿಕೊಂಡಿರುವ ಅನೇಕ ಅಭ್ಯರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಸಮುತ್ಕರ್ಷ ಐ.ಎ.ಎಸ್. ಅಕಾಡೆಮಿ ವತಿಯಿಂದ ನಾಗರೀಕ ಸೇವಾ ಪರೀಕ್ಷೆಗಳ ಕುರಿತಾಗಿ ಎರಡು ಗಂಟೆಗಳ ಕಾರ್ಯಾಕ್ರಮವನ್ನು ಶಿರಸಿಯ ಯೋಗ ಮಂದಿರದಲ್ಲಿ ಡಿ.29 ಬುಧವಾರ ಬೆಳಿಗ್ಗೆ 11 ಗಂಟೆಯಿಂದ ಮತ್ತು ಅದೇ ದಿನ ಕುಮಟಾದ ರೋಟರಿ ಕ್ಲಬ್ ಹಾಲ್’ನಲ್ಲಿ ಸಂಜೆ 4 ಗಂಟೆಯಿಂದ ‘How to crack IAS’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸಮುತ್ಕರ್ಷ ಸಂಸ್ಥೆಯು ದೆಹಲಿಯ ಪ್ರತಿಷ್ಠಿತ ಸಂಕಲ್ಪ ಐ.ಎ.ಎಸ್. ನ ಸಹಯೋಗದೊಂದಿಗೆ ಕಳೆದ ಐದು ವರ್ಷಗಳಿಂದ ತರಬೇತಿ ನೀಡುತ್ತಾ ಬಂದಿದೆ. ಇದುವರೆಗೂ ಪ್ರತೀ ವರ್ಷವೂ ಸಮುತ್ಕರ್ಷ ಸಂಸ್ಥೆಯಿಂದ ತರಬೇತಿ ಪಡೆದ ಅನೇಕ ಅಬ್ಯರ್ಥಿಗಳು ನಾಗರೀಕ ಸೇವೆಗಳಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ.
ಕಾರ್ಯಕ್ರಮದಲ್ಲಿ ನುರಿತ ತಜ್ಞರಿಂದ IAS,IPS,IFS,IRS, KAS ಮುಂತಾದ ಪರೀಕ್ಷೆಗಳ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ಇದು ಉಚಿತವಾಗಿದ್ದು ಆಸಕ್ತರೆಲ್ಲರೂ ಮುಕ್ತವಾಗಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9663400284 ಗೆ ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.