ಶಿರಸಿ: ಸರ್ಕಾರದ ಆದೇಶದಂತೆ ಕೊರೋನಾ ಮತ್ತು ಒಮ್ರಿಕಾನ್ ಅಪಾಯಕಾರಿ ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಡಿ.28 ರಿಂದ ಜ.7 ರವರೆಗೆ ರಾತ್ರಿ 10 ಗಂಟೆ ಯಿಂದ ಬೆಳಿಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ ಎಂದು ಶಿರಸಿ ನಗರಸಭೆಯ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸವರ್ಷಾಚರಣೆ ಕಾರಣದಿಂದಾಗಿ ಡಿ.30 ರಿಂದ 2 ರ ಅವಧಿಯಲ್ಲಿ ಹೋಟೆಲ್ ರೆಸ್ಟೋರೆಂಟ್ ಕ್ಲಬ್ ಇತ್ಯಾದಿ ಆಚರಣಾ ಪ್ರದೇಶಗಳಲ್ಲಿ ಶೇಖಡ 50 ರಷ್ಟು ಜನರಿಗೆ ಮಾತ್ರ ಅವಕಾಶ ಇದೆ. ಹಾಗೂ ಮದುವೆ ಇನ್ನಿತರೆ ಸಭೆ ಸಮಾರಂಭಗಳಲ್ಲಿ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ಸಂದರ್ಭಗಳಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸತಕ್ಕದ್ಧು. ಸಾರ್ವಜನಿಕರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದು ಕೊಂಡು ಸಹಕರಿಸುವಂತೆ ವಿನಂತಿಸಲಾಗಿದೆ. ತಪ್ಪಿದಲ್ಲಿ ಅಂಥವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಶಿರಸಿ ನಗರಸಭೆಯ ಪ್ರಕಟಣೆ ತಿಳಿಯಪಡಿಸಿದೆ.