
ಕುಮಟಾ: ಪಟ್ಟಣದ ಬಸ್ತಿಪೇಟೆ ಕ್ರಾಸ್‍ನಲ್ಲಿ ನೂತನವಾಗಿ ಆರಂಭವಾದ ಕುಮಟಾ ದೈವಜ್ಞ ಸೌಹಾರ್ದ ಸಹಕಾರಿ ನಿಯಮಿತವು ಭಾನುವಾರ ಶುಭಾರಂಭಗೊಂಡಿತು.
ಕರ್ಕಿಯ ದೈವಜ್ಞ ಬ್ರಾಹ್ಮಣ ಜ್ಞಾನೇಶ್ವರಿ ಪೀಠದ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಅಧ್ಯಕ್ಷ ಆರ್.ಎಸ್.ರಾಯ್ಕರ ಉಪೆÇ್ಪೀಣಿ ಸಹಕಾರಿ ಬ್ಯಾಂಕ್‍ನ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಔದ್ಯೋಗಿಕ ಕ್ರಾಂತಿಯಲ್ಲಿ ಬ್ಯಾಂಕ್ ಪ್ರಮುಖ ಪಾತ್ರವಹಿಸುತ್ತದೆ. ದೈವಜ್ಞ ಸೌಹಾರ್ದ ಸಹಕಾರಿ ನಿಯಮಿತದಿಂದ ಯುವ ಉದ್ಯಮಿಗಳು ಹುಟ್ಟಿಕೊಳ್ಳುವಂತಾಗಲಿ. ಅತ್ಯುತ್ತಮ ಸಹಕಾರಿ ಸೇವೆ ಒದಗಿಸಿಕೊಡುವ ಮೂಲಕ ಜಿಲ್ಲೆಯಲ್ಲಿಯೇ ಈ ಬ್ಯಾಂಕ್ ಪ್ರಸಿದ್ಧಿಗಳಿಸಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪುರಸಭಾ ಅಧ್ಯಕ್ಷೆ ಮೋಹಿನಿ ಗೌಡ, ಶ್ರೀ ರಾಮಚಂದ್ರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿ.ಜಿ.ಶೆಟ್ಟಿ ಶುಭ ಹಾರೈಸಿದರು. ಕುಮಟಾ ದೈವಜ್ಞ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ರಾಮದಾಸ ಶೇಟ್ ಮಾತನಾಡಿ, ಉತ್ಸಾಹಿ ನಿರ್ದೇಶಕರ ಮಂಡಳಿಯ ಶ್ರಮದ ಫಲವಾಗಿ ಈ ಸಹಕಾರಿ ಬ್ಯಾಂಕ್ ಉದ್ಘಾಟನೆಯಾಗಿದೆ. ಇದು ಕೇವಲ ನಮ್ಮ ಸಮಾಜಕ್ಕೆ ಮಾತ್ರ ಸೀಮಿತವಾಗದೇ ಉಳಿದ ಸಮಾಜಕ್ಕೂ ಬ್ಯಾಂಕಿಂಗ್ ಸೇವೆ ಒದಗಿಸಿಕೊಡಲಿದೆ. ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವ ಮೂಲಕ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಪಲ್ಲವಿ ಮಡಿವಾಳ, ಶೈಲಾ ಗೌಡ ಸೇರಿದಂತೆ ದೈವಜ್ಞ ಸಮಾಜದ ಪ್ರಮುಖರಿದ್ದರು. ಪೆÇ್ರ.ಆನಂದು ನಾಯಕ ನಿರೂಪಿಸಿ, ವಂದಿಸಿದರು.