ಕಾರವಾರ: ಕಿನ್ನರ ಗ್ರಾಮದ ನ್ಯೂ ಹೈಸ್ಕೂಲ್’ನ 20ಕ್ಕೂ ಹೆಚ್ಚು ಮಕ್ಕಳಿಗೆ ಜೇನು ನೊಣ ಕಡಿದ ಘಟನೆ ಇಂದು ನಡೆದಿದೆ.
ಜೇನು ಕಡಿತದಿಂದ 16 ಮಕ್ಕಳು ಗಂಭೀರ ಗಾಯಗೊಂಡು ಅಸ್ವಸ್ತರಾಗಿ, ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಶಾಲೆಗೆ ಮಕ್ಕಳು ಹೋಗುತ್ತಿರುವಾಗ ಏಕಾ-ಏಕಿ ಶಾಲೆಯ ಪಕ್ಕದಲ್ಲೇ ಇರುವ ತೆಂಗಿನ ಮರದಲ್ಲಿ ಗೂಡು ಕಟ್ಟಿದ್ದ ಜೇನು ನೊಣ ದಾಳಿ ಮಾಡಿದೆ. ಇದರಿಂದ 20 ಕ್ಕೂ ಹೆಚ್ಚು ಮಕ್ಕಳಿಗೆ ಜೇನು ಕಡಿದಿದೆ. ತಕ್ಷಣದಲ್ಲಿ 16 ಮಕ್ಕಳನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಲ್ಲದೇ ಗ್ರಾಮದ ಓರ್ವ ಪುರುಷ ಹಾಗೂ ಮಹಿಳೆಗೂ ಜೇನು ಕಚ್ಚಿದ್ದು ಗಂಭೀರ ಗಾಯಗೊಂಡ ಇವರನ್ನು ಸಹ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕಿ ರೂಪಾಲಿ ಆಸ್ಪತ್ರೆಗೆ ಭೇಟಿ: ಇನ್ನು ಘಟನೆ ನಡೆದ ವಿಷಯ ತಿಳಿದ ಕಾರವಾರದ ಶಾಸಕಿ ರೂಪಾಲಿ ನಾಯ್ಕ ರವರು ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಸ್ಥಿತಿ ಗತಿ ವಿಚಾರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳ ಮೇಲೆ ಜೇನು ಹೆಚ್ಚಿನ ಹಾನಿ ಮಾಡಿದೆ. ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಲಾಗಿದೆ. ಅರಣ್ಯ ಇಲಾಖೆಗೂ ಸಹ ಸೂಚನೆ ನೀಡಲಾಗಿದ್ದು ಶಾಲಾ ಆವರಣದಲ್ಲಿ ಇರುವ ಜೇನನ್ನು ತೆರವು ಗೊಳಿಸಲು ತಿಳಿಸಲಾಗಿದೆ ಎಂದರು.