• Slide
    Slide
    Slide
    previous arrow
    next arrow
  • ಬೂಸ್ಟರ್ ಡೋಸ್-ಮಕ್ಕಳ ಲಸಿಕೆ ವಿತರಣೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಸರ್ಕಾರ

    300x250 AD

    ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಮಕ್ಕಳಿಗೆ ಕೋವಿಡ್-19 ಲಸಿಕೆ ಮತ್ತು ಆರೋಗ್ಯ ರಕ್ಷಣಾ ಕಾರ್ಯಕರ್ತರು, ಮುಂಚೂಣಿಯ ಕಾರ್ಮಿಕರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಕೊಮೊರ್ಬಿಡಿಟಿ ಹೊಂದಿರುವ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡಲು ಮಾರ್ಗಸೂಚಿಗಳನ್ನು ಹೊರಡಿಸಿದೆ.

    ಜನವರಿ 3 ರಿಂದ 15 -18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಮತ್ತು ಆರೋಗ್ಯ ರಕ್ಷಣೆ ಮತ್ತು ಮುಂಚೂಣಿಯ ಕಾರ್ಯಕರ್ತರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಿಕೆ ಪ್ರಾರಂಭವಾಗಲಿದೆ.

    ಮಕ್ಕಳಿಗೆ ಕೋವ್ಯಾಕ್ಸಿನ್ ಮಾತ್ರ ನೀಡಲಾಗುತ್ತದೆ ಮತ್ತು ಜನವರಿ 1 ರಿಂದ COWIN ನಲ್ಲಿ ನೋಂದಣಿ ಪ್ರಾರಂಭವಾಗುತ್ತದೆ.

    300x250 AD

    ಮಾರ್ಗಸೂಚಿಗಳ ಪ್ರಕಾರ, ಫಲಾನುಭವಿಗಳು COWIN ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯ ಮೂಲಕ ಆನ್‍ಲೈನ್‍ನಲ್ಲಿ ಸ್ವಯಂ-ನೋಂದಣಿ ಮಾಡಿಕೊಳ್ಳಬಹುದು ಅಥವಾ ಮೊಬೈಲ್ ಸಂಖ್ಯೆಯ ಮೂಲಕ ಹೊಸ ಖಾತೆಯನ್ನು ರಚಿಸುವ ಮೂಲಕ ನೋಂದಾಯಿಸಿಕೊಳ್ಳಬಹುದು. ವ್ಯಾಕ್ಸಿನೇಷನ್‍ಗಾಗಿ ಅಪಾಯಿಂಟ್‍ಮೆಂಟ್ ಅನ್ನು ಆನ್‍ಲೈನ್‍ನಲ್ಲಿ ಬುಕ್ ಮಾಡಬಹುದು ಅಥವಾ ವಾಕ್-ಇನ್ ಮಾಡಬಹುದು.

    ಎಲ್ಲಾ ನಾಗರಿಕರು ತಮ್ಮ ಆದಾಯದ ಸ್ಥಿತಿಯನ್ನು ಲೆಕ್ಕಿಸದೆ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಉಚಿತ ಕೋವಿಡ್-19 ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಪಾವತಿಸುವ ಸಾಮಥ್ರ್ಯವನ್ನು ಹೊಂದಿರುವವರು ಖಾಸಗಿ ಆಸ್ಪತ್ರೆಗಳ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top