• first
  second
  third
  previous arrow
  next arrow
 • ಕಬ್ಬಿಣದ ಗೇಟು ಕಳ್ಳತನ; ಮೂವರು ಆರೋಪಿಗಳ ಬಂಧನ

  300x250 AD

  ಸಿದ್ದಾಪುರ: ತಾಲೂಕಿನ ಬೆಳಗಿ ಪಂಚಾಯತ ವ್ಯಾಪ್ತಿಯ ಗೋಳಿಕೈ ಗ್ರಾಮದ ಕಳೂರಿನಲ್ಲಿ ಕಬ್ಬಿಣದ ಗೇಟು ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.


  ಕಳೂರಿನಲ್ಲಿ ಸರ್ಕಾರದಿಂದ ನೀರಾವರಿ ಯೋಜನೆಗೆ ಬಾಂದಾರುಗಳನ್ನು ನಿರ್ಮಿಸಲು ನೀಡಿದ್ದ ಕಬ್ಬಿಣದ ಗೇಟು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿದ್ದು. ಈ ಪ್ರಕರಣ ಸಂಬಂಧ ಸತೀಶ ನಾಗು ಗೌಡ(27), ವಿನಾಯಕ ಸುಗ್ಗಿ ಗೌಡ(32), ಶ್ರೀಕಾಂತ ಹುಲಿಯಾ ಗೌಡ(29) ಬಂಧಿತ ಆರೋಪಿಗಳು. ಅವರಿಂದ ಅವರಿಂದ ಕಳ್ಳತನ ಮಾಡಿದ 96,000 ರೂ ಮೌಲ್ಯದ, ಕಬ್ಬಿಣದ 16 ಗೇಟುಗಳು ಮತ್ತು ಕಳ್ಳತನಕ್ಕೆ ಬಳಸಿದ ವಾಹನ ವಶಕ್ಕೆ ಪಡೆದುಕೊಂಡಿದ್ದಾರೆ.

  300x250 AD


  ಕಾರ್ಯಾಚರಣೆಯಲ್ಲಿ ಎಸ್ಪಿ ಸುಮನ್ ಪೆನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭದ್ರಿನಾಥ ಅವರ ಮಾರ್ಗದರ್ಶನದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಕುಮಾರ ಕೆ, ಪಿ.ಎಸ್.ಐ ಮಂಜೇಶ್ವರ ಚಂದಾವರ, ಮಹಾಂತಪ್ಪ ಕುಂಬಾರ ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಂಗಾಧರ ಹೊಂಗಲ್, ರಮೇಶ ಕೂಡಲ್, ಉದಯ ಮೇಸ್ತ, ರಾಜು ಎಂ. ಇದ್ದರು.

  Share This
  300x250 AD
  300x250 AD
  300x250 AD
  Back to top