• first
    second
    third
    previous arrow
    next arrow
  • ಪಾದಾಚಾರಿ ಮಹಿಳೆಗೆ ಲಾರಿ ಡಿಕ್ಕಿ; ಸಾವು

    300x250 AD


    ಕುಮಟಾ: ಇಲ್ಲಿನ ಮಿರ್ಜಾನಿನ ಚತುಷ್ಪಥ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲಾರಿ ಡಿಕ್ಕಿಯಾಗಿ ಮೃತ ಮಟ್ಟ ಘಟನೆ ವರದಿಯಾಗಿದೆ.


    ಮಿರ್ಜಾನ ಕೋಟೆ ರಸ್ತೆ ನಿವಾಸಿ ದುಮಗಿ ಲಾರೆನ್ಸ್ ಗೊನ್ಸಾಲ್ವಿಸ್ ಮೃತ ಪಾದಚಾರಿ ಮಹಿಳೆ. ಈಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಂಕೋಲಾ ಕಡೆಯಿಂದ ಕುಮಟಾ ಕಡೆಗೆ ಸಾಗುತ್ತಿದ್ದ ಲಾರಿ ಬಡಿದು ಸಾವನ್ನಪ್ಪಿದ್ದಾಳೆ. ಮಹಾರಾಷ್ಟ್ರದ ಯಲವಾಡಿಯ ಕೃಷ್ಣ ದಡಸ್ ಲಾರಿ ಚಾಲಕನಾಗಿದ್ದು, ಈತ ಅತಿವೇಗ ಹಾಗೂ ನಿಷ್ಠಾಳಜಿಯಿಂದ ಲಾರಿ ಚಲಾಯಿಸುತ್ತ, ಹೆದ್ದಾರಿಗೆ ಅಡ್ಡ ಬಂದ ಆಕಳನ್ನು ತಪ್ಪಿಸಲು ಹೋಗಿ ಪಾದಚಾರಿ ವೃದ್ದೆಗೆ ಡಿಕ್ಕಿಪಡಿಸಿದ್ದಾನೆ ಎನ್ನಲಾಗಿದೆ.

    300x250 AD


    ಅಪಘಾತದಲ್ಲಿ ದುಮಗಿ ಗೊನ್ಸಾಲ್ವಿಸ್ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದು, ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಬಳಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಪಿ.ಎಸ್.ಐ ರವಿ ಗುಡ್ಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Back to top