• Slide
    Slide
    Slide
    previous arrow
    next arrow
  • ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಘೋಷಣೆ; ಅರಣ್ಯವಾಸಿಗಳ ದೌರ್ಜನ್ಯ ವರ್ಷ- 2021

    300x250 AD

    ಶಿರಸಿ: ಅರಣ್ಯವಾಸಿಗಳ ಪರ ಮೂವತ್ತು ವರ್ಷ ಹೋರಾಟದ ಇತಿಹಾಸದಲ್ಲಿಯೇ ಅತೀ ಹೆಚ್ಚು ಪ್ರಸಕ್ತ ವರ್ಷ ಅರಣ್ಯವಾಸಿಗಳ ಮೇಲೆ ದೌರ್ಜನ್ಯ ವಾಗಿರುವದರಿಂದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳ ದೌರ್ಜನ್ಯ ವರ್ಷ- 2021' ಏಂದು ಹೋರಾಟಗಾರರ ವೇದಿಕೆ ಘೋಷಿಸುತ್ತದೆ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    ಅವರು ಇಂದು ಶಿರಸಿಯ ಹೋರಾಟಗಾರರ ವೇದಿಕೆಯ ಜಿಲ್ಲಾ ಕಾರ್ಯಾಲಯದಲ್ಲಿ ಪ್ರಸಕ್ತ ವರ್ಷ ಹೋರಾಟದ ಅವಲೋಕ ಸಭೆಯಲ್ಲಿ ಅರಣ್ಯ ಸಿಬ್ಬಂದಿಗಳಿಂದ ಉಂಟಾದ ದೌರ್ಜನ್ಯಗಳಲ್ಲಿಉತ್ತಮ ದೌರ್ಜನ್ಯದ ಏಕ್ಸನ್(ನಡೆ) ಚಿತ್ರ’ ಪ್ರದರ್ಶಿಸುತ್ತ ಮಾತನಾಡುತ್ತಿದ್ದರು. ಪ್ರಸಕ್ತ ವರ್ಷ ಜಿಲ್ಲಾದ್ಯಂತ ನಾಲ್ಕು ದಿನಕ್ಕೆ ಒಂದರಂತೆ ಅರಣ್ಯವಾಸಿಗಳ ಮೇಲೆ ದೌರ್ಜನ್ಯ, ದೈಹಿಕ ಹಲ್ಲೆ, ಕಿರುಕುಳ, ಮಾನಸಿಕ ಹಿಂಸೆ ಜರುಗಿದ್ದು ಇರುತ್ತದೆ ಎಂದು ಅವರು ಹೇಳಿದರು.

    300x250 AD

    ಅಲ್ಲದೇ, ವಿವಿಧ ಕ್ಷೇತ್ರದಲ್ಲಿ ಅರಣ್ಯವಾಸಿಗಳ ಮೇಲೆ ಕ್ರೀಮಿನಲ್ ಪ್ರಕರಣ ದಾಖಲಿಸಿದ್ದು ವಿಷಾದಕರ ಏಂದು ಅವರು ತಿಳಿಸಿದರು. ಅತೀ ಶೀಘ್ರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಂಭವಿಸಿದರೇ ಅರಣ್ಯವಾಸಿಗಳ ದೌರ್ಜನ್ಯ ವರ್ಷ- 2021' ರ ಪ್ರಶಸ್ತಿ ವಿತರಿಸಲಾಗುವುದು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ರಾಮ ಪೂಜಾರಿ, ವೆಂಕಟೇಶ ಗೌಡ, ಶೇಖರ್ ಸಿಧ್ಧಿ, ಗಣಪತಿ ಗುಡ್ನಾಪುರ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top