ಶಿರಸಿ: ಕರೋನಾ ಎರಡನೇ ಅಲೆಯಲ್ಲಿ 105 ಜನ ತಾಲೂಕಿನಲ್ಲಿ ಮೃತಪಟ್ಟಿದ್ದು, ಎಲ್ಲರಿಗೂ ಸರ್ಕಾರದಿಂದ ನೀಡುವ ಪರಿಹಾರ ಧನದ ಚೆಕ್ ವಿತರಿಸಲಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಫಲಾನುಭವಿಗಳಿಗೆ ಚೆಕ್ ವಿತರಿಸಿದರು. 52 ಬಿಪಿಎಲ್ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 15000 ರೂ. ನೀಡಲಾಗುತ್ತಿದೆ. ಎಪಿಲ್ ಕುಟುಂಬಕ್ಕೆ 50000 ರೂ. ಪರಿಹಾರ ಧನ ನೀಡಲಾಗುತ್ತಿದೆ. ತಾಲೂಕಿನ ನಾಲ್ವರಿಗೆ ಚೆಕ್ ಬರಬೇಕಿದ್ದು ಉಳಿದವರಿಗೆ ಸಹಾಯದನ ನೀಡಲಾಗಿದೆ ಎಂದರು. ಎಪಿಎಲ್ ಕುಟುಂಬಗಳಿಗೆ ನೇರವಾಗಿ ಖಾತೆಗೆ ಹಣ ಜಮಾ ಆಗಿದೆ ಎಂದು ತಿಳಿಸಿದರು. ತಾಲೂಕಿನ 680 ಹೆಕ್ಟೇರ್ ಕೃಷಿ ಪ್ರದೇಶ ಮಳೆ ಹಾನಿಗೆ ತುತ್ತಾಗಿದೆ. 79 ಮನೆಗಳಿಗೆ ಹಾನಿಯಾಗಿದೆ. ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕರೋನಾದಿಂದ ಸರ್ಕಾರ ಸಾಕಷ್ಟು ಆರ್ಥಿಕ ಸಂಕಷ್ಟದಲ್ಲಿದೆ. ಆದರೂ ನೊಂದ ಕುಟುಂಬಗಳಿಗೆ ಆಸರೆಯಾಗುವ ಉದ್ದೇಶದಿಂದ ಸಹಾಯಧನ ವಿತರಿಸುತ್ತಿದೆ ಎಂದು ಹೇಳಿದರು. ವ್ಯಾಕ್ಸಿನ್ ತ್ವರಿತಗತಿಯ ವಿತರಣೆಗೆ ಮೋದಿ ವಹಿಸಿದ ಪರಿಣಾಮ ಕರೋನಾ ಭಾರತದಂತಹಾ ಬೃಹತ್ ರಾಷ್ಟ್ರದಲ್ಲೂ ನಿಯಂತ್ರಣ ಸಾಧ್ಯವಾಗಿದೆ ಎಂದರು.
ಶಿರಸಿಯಲ್ಲಿ ಸೋಮವಾರ 12 ಕ್ಕು ಹೆಚ್ಚು ಕರೋನಾ ಪ್ರಕರಣ ಕಂಡುಬಂದಿದೆ. ಅಲ್ಲದೇ ಮೂರನೇ ಅಲೆ ಆರಂಭವಾಗುವ ಸೂಚನೆ ಈಗಲೇ ಕೇಳಿಬಂದಿದೆ.
ತಾಲೂಕಿನ ಜನ ಇದನ್ನು ನಿರ್ಲಕ್ಷಿಸಿದೆ ಕರೋನಾ ಅಲೆಯಿಂದ ನಮ್ಮನ್ನ ರಕ್ಷಿಸಿಕೊಳ್ಳಬೇಕು. – ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ