ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ಸ್ಪರ್ಧೆಯ ವಿಜೇತರು.
16 ವರ್ಷ ವಯೋಮಾನದ ಹುಡುಗಿಯರ ವಿಭಾಗದ 2 ಕಿ.ಮಿ ಓಟದಲ್ಲಿ ಪ್ರಣತಿ ಬೆಂಗಳೂರು ಉತ್ತರ ಪ್ರಥಮ, ಪ್ರಿಯಾಂಕ ಧಾರವಾಡ ದ್ವಿತೀಯ, ಶರಣ್ಯಾ ಬೆಂಗಳೂರು ತೃತೀಯ. 16 ವರ್ಷದ ಬಾಲಕರ ವಿಭಾಗದ 2 ಕಿಮಿ ಓಟದಲ್ಲಿ ಚಿಂತನ ಎಚ್.ವಿ ಕೊಡಗು ಪ್ರಥಮ, ಭರತ್ ಎಚ್. ಗಿರಿಗೌಡ ಮೈಸೂರು ದ್ವಿತೀಯ, ವೇದವರುಣ ಎಸ್.ಮೈಸೂರು ತೃತೀಯ ಸ್ಥಾನ ಪಡೆದಿದ್ದಾರೆ.
18 ವರ್ಷದ ಬಾಲಕೀಯರ 4 ಕಿ.ಮಿ ಓಟದಲ್ಲಿ ಯುವರಾಣಿ ಬೆಂಗಳೂರು ಪ್ರಥಮ, ಸ್ಪಂದನ.ಪಿ.ಎಸ್ ದಕ್ಷಿಣ ಕನ್ನಡ ದ್ವಿತೀಯ, ರೂಪಶ್ರೀ ಎನ್.ಎಸ್ ದಕ್ಷಿಣ ಕನ್ನಡ ತೃತೀಯ ಸ್ಥಾನ ಪಡೆದಿದ್ದಾರೆ.
18 ವರ್ಷದ ಬಾಲಕರ 6 ಕಿ.ಮಿ ಓಟದಲ್ಲಿ ಶಿವಾಜಿ.ಪಿ.ಎಂ ಬೆಂಗಳೂರು ಪ್ರಥಮ, ಬಾಲು ಹೆಗ್ರಿ ಧಾರವಾಡ ದ್ವಿತೀಯ, ಲೋಕೇಶ ಕೆ.ಬೆಂಗಳೂರು ತೃತೀಯ ಸ್ಥಾನ ಪಡೆದಿದ್ದಾರೆ.
20 ವರ್ಷದ ಬಾಲಕೀಯರ ವಿಭಾಗದ 6 ಕಿ.ಮಿ ಓಟದಲ್ಲಿ ರಶ್ಮೀ ಸಿ.ಎಂ ಬೆಂಗಳೂರು ಪ್ರಥಮ, ಪ್ರಿಯಾಂಕ ಬೆಂಗಳೂರು ದ್ವಿತೀಯ, ಚೈತ್ರ.ಪಿ ದಕ್ಷಿಣ ಕನ್ನಡ ತೃತೀಯ ಸ್ಥಾನ ಪಡೆದಿದ್ದಾರೆ.
20 ವರ್ಷದ ಬಾಲಕರ ವಿಭಾಗದ 8 ಕಿ.ಮಿ ಓಟದಲ್ಲಿ ಅರುಣ ಮಾಲವಿ ಬೆಂಗಳೂರು ಪ್ರಥಮ, ನರಸಿಂಗ ಪಾಟೀಲ್ ಬೆಂಗಳೂರು ದ್ವೀತೀಯ, ವೈಭವ ಪಾಟೀಲ್ ಬೆಂಗಳೂರು ತೃತೀಯ ಸ್ಥಾನ ಪಡೆದಿದ್ದಾರೆ.
ಹೆಣ್ಣುಮಕ್ಕಳ 10 ಕಿ.ಮಿ ಓಟದಲ್ಲಿ ಅರ್ಚನಾ.ಕೆ.ಎಂ. ಮೈಸೂರು ಪ್ರಥಮ, ಚೈತ್ರ ದೇವಾಡಿಗ ದಕ್ಷಿಣ ಕನ್ನಡ ದ್ವಿತೀಯ, ಸಾಹಿಲ್ ಎಸ್.ಡಿ ದಕ್ಷಿಣ ಕನ್ನಡ ತೃತೀಯ ಸ್ಥಾನಪಡೆದಿದ್ದಾರೆ. ಬಾಲಕರ ವಿಭಾಗದ 10ಕಿ.ಮಿ ಓಟದಲ್ಲಿ ಪರಸಪ್ಪ ದಕ್ಷಿಣ ಕನ್ನಡ ಪ್ರಥಮ, ರಾಘವೇಂದ್ರ.ಆರ್.ಸಿ ಕಾರವಾರ ದ್ವಿತೀಯ, ನಿಥಿನ ಕುಮಾರೆಂ ಕೊಡಗು ತೃತೀಯ ಸ್ಥಾನ ಪಡೆದಿದ್ದಾರೆ.