• first
  second
  third
  previous arrow
  next arrow
 • ಜನವರಿಯಿಂದ ಹಾಲಿನ ದರ 50 ಪೈಸೆ ಹೆಚ್ಚಳ; ನಂದಿನಿ ಪಶು ಆಹಾರ ಬೆಲೆ ಇಳಿಕೆ

  300x250 AD


  ಶಿರಸಿ: ಧಾರವಾಡ ಹಾಲು ಒಕ್ಕೂಟದ ವತಿಯಿಂದ ಜಾನ್ಮನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಗಣಪತಿ ವಿ ಹೆಗಡೆ, ಗುಡ್ನಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಪ್ರವೀಣ ಎಂ ನಾಯ್ಕ, ಜಾನುವಾರುಗಳು ಮರಣ ಹೊಂದಿದ ಕಾರಣ ಜಾನುವಾರು ವಿಮೆಯ ಅಡಿಯಲ್ಲಿ ತಲಾ ರೂ.40,000, ರೂ.45,000 ಗಳ ಮೊತ್ತದ ಚೆಕ್ಗಳನ್ನು ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ಲಿ., ಶಿರಸಿಯ ವತಿಯಿಂದ ಬಿಸಲಕೊಪ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಉತ್ಪಾದಕ ಸದಸ್ಯರಾದ ಶ್ರೀಪತಿ ನರಸಿಂಹ ಹೆಗಡೆ ಇವರ ಜಾನುವಾರು ಮರಣ ಹೊಂದಿದ ಕಾರಣ ಕೆ.ಡಿ.ಸಿ.ಸಿ ಬ್ಯಾಂಕ್ ಲಿ., ಶಿರಸಿಯ ನಿರ್ದೇಶಕರ ಅನುದಾನದ ನಿಧಿಯ ಅಡಿಯಲ್ಲಿ ರೂ.8,000 ಗಳ ಮೊತ್ತದ ಚೆಕ್’ನ್ನು ಜಾನುವಾರುಗಳವಾರ ಸುಧಾರಕರಿಗೆ ಧಾರವಾಡ ಹಾಲು ಒಕ್ಕೂಟದ ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿಯ ನಿರ್ದೇಶಕ ಸುರೇಶ್ಚಂದ್ರ ಕೆ ಹೆಗಡೆ ಕೆಶಿನ್ಮನೆ ವಿತರಿಸಿದರು.


  ಈ ಸಂದರ್ಭದಲ್ಲಿ ಮಾತನಾಡಿದ ಅವರು ಧಾರವಾಡ ಹಾಲು ಒಕ್ಕೂಟದ ಕೇಂದ್ರ ಕಚೇರಿಯ ಆವರಣದಲ್ಲಿ ಕಲ್ಯಾಣ ಸಂಘದ ವತಿಯಿಂದ ಕಲ್ಯಾಣ ಮಂಟಪ ಹಾಗೂ ಸಭಾಭವನದ ನಿರ್ಮಾಣದ ಕಾರ್ಯಶೀಘ್ರದಲ್ಲಿಯೇ ಆರಂಭವಾಗಲಿದ್ದು, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷರಾದ ಶಂಕರ ವಿ ಮುಗದ ಅವರು ಅಧಿಕಾರವಹಿಸಿಕೊಂಡಾಗಿನಿಂದ ಅತ್ಯಂತ ಕ್ರಿಯಾಶೀಲರಾಗಿ ಎಲ್ಲಾ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸಿ ಸ್ವತಃ ಮುತುವರ್ಜಿ ವಹಿಸಿ ಒಕ್ಕೂಟದ ವ್ಯವಸ್ಥೆಯನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಿದ್ದಾರೆ. ಹಾಗೂ ಶಂಕರ ವಿ ಮುಗದ ಅವರ ನೇತ್ರತ್ವದಲ್ಲಿ ಮತ್ತು ಒಕ್ಕೂಟದ ಇನ್ನುಳಿದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ಕಲ್ಯಾಣ ಸಂಘದ ಹಾಲು ಉತ್ಪಾದಕ ಸದಸ್ಯರುಗಳ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ಅಂದಾಜು ರೂ. 4 ಕೋಟಿಗಳ ವೆಚ್ಚದಲ್ಲಿ ವಿದ್ಯಾನಿಧಿ ವಿದ್ಯಾರ್ಥಿ ವಸತಿ ನಿಲಯವನ್ನೂ ಸಹ ಒಕ್ಕೂಟದ ನಿವೇಶನದಲ್ಲಿಯೇನಿರ್ಮಾಣ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಕಲ್ಯಾಣ ಸಂಘದಿಂದ ಕಲ್ಯಾಣ ಸಂಘದ ಹಾಲು ಉತ್ಪಾದಕ ಸದಸ್ಯರಿಗೆ ವಿಶೇಷ ಅನುದಾನದಲ್ಲಿಹಾಲು ಕರೆಯುವ ಯಂತ್ರ, ರಬ್ಬರ್ ಮ್ಯಾಟ್ ಮತ್ತು ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲಾಗುವುದು ಎಂದರು.

  ಅತೀ ಮುಖ್ಯವಾಗಿ ಬರುವ ಜನವರಿ ಮಾಹೆಯಲ್ಲಿ ಪ್ರತೀ ಲೀಟರ್ ಆಕಳು ಹಾಲಿಗೆ ರೈತರಿಗೆ ನೀಡಲಾಗುವ ಹಾಲಿನ ದರದಲ್ಲಿ ರೂ.0.50ಪೈಸೆ ಹಾಗೂ ಪ್ರತೀಲೀಟರ್ ಎಮ್ಮೆಯ ಹಾಲಿಗೆ ರೂ.4 ಹೆಚ್ಚಿಸುವುದಾಗಿ ಮತ್ತು ನಂದಿನಿಗೋಲ್ಡ್, ನಂದಿನಿ ಬೈಪಾಸ್ ಪಶು ಆಹಾರದ 50 ಕೆ.ಜಿ. ಚೀಲಗಳ ಮೇಲೆ ತಲಾರೂ.26ನಂತೆ ಕಡಿತ ಮಾಡಲಾಗುವುದು ಎಂದು ಮಾಹಿತಿ ನೀಡಿದರು. ಪ್ರಸ್ತುತವಾಗಿ ಹಾಲು ಉತ್ಪಾದಕ ರೈತರಿಗೆ ಉತ್ತಮ ಗುಣಮಟ್ಟದ ಪ್ರತೀಲೀಟರ್ ಆಕಳು ಹಾಲಿಗೆ ರೂ.24.50, ಉತ್ತಮ ಗುಣಮಟ್ಟದ ಪ್ರತೀಲೀಟರ್ ಎಮ್ಮೆ ಹಾಲಿಗೆ ರೂ.33.25ನಂತೆ ಇದ್ದು, ದರ ಹೆಚ್ಚಳದಿಂದ ರೈತರಿಗೆ ಪ್ರತೀ ಲೀಟರ್ ಆಕಳು ಹಾಲಿಗೆ ರೂ.25.00, ಹಾಗೂ ಪ್ರತೀ ಲೀಟರ್ ಎಮ್ಮೆಹಾಲಿಗೆ ರೂ.37.25 ರಂತೆ ದರ ಸಿಗಲಿದೆ ಎಂದರು.

  300x250 AD


  ಅದರಂತೆಯೇ ಪ್ರತೀ50 ಕೆ.ಜಿ. ನಂದಿನಿಗೋಲ್ಡ್ ಚೀಲಕ್ಕೆರೂ.1012 ನಂತೆ, ಪ್ರತೀ 50 ಕೆ.ಜಿ. ನಂದಿನಿ ಬೈಪಾಸ್ ಚೀಲಕ್ಕೆರೂ.1138 ರಂತೆ ಇದ್ದು, ದರ ಕಡಿತದ ನಂತರಪ್ರತೀ 50 ಕೆ.ಜಿ. ನಂದಿನಿಗೋಲ್ಡ್ ಚೀಲಕ್ಕೆ ರೂ.986, ನಂದಿನಿ ಬೈಪಾಸ್ ಚೀಲಕ್ಕೆರೂ.1112 ರಂತೆ ರೈತರಿಗೆ ದೊರೆಯಲಿದೆ ಎಂದರು. ಇದರಿಂದ ಹಾಲು ಉತ್ಪಾದಕ ರೈತರಿಗೆ ಅತ್ಯಂತ ಸಹಕಾರಿಯಾಗಲಿದ್ದು, ರೈತರ ಹಿತದೃಷ್ಠಿಯಿಂದ ಇದು ಬಹಳ ಅನುಕೂಲಕರವಾಗಲಿದೆ ಎಂದರು.


  ಈ ಸಂದರ್ಭದಲ್ಲಿ ಗುಡ್ನಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ತೋಟಪ್ಪ ನಾಯ್ಕ, ಬಿಸಲಕೊಪ್ಪ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕರಾದ ಮಂಜುನಾಥ ನಾಯ್ಕ, ಜಾನುವಾರು ವಿಮಾಫಲಾನುಭವಿಗಳಾದ ಗಣಪತಿ ವಿ ಹೆಗಡೆ, ಪ್ರವೀಣ ಎಂ ನಾಯ್ಕ, ಹಾಗೂ ಶಿರಸಿ ಉಪವಿಭಾಗದ ಗುರುದರ್ಶನ ಭಟ್, ವಿಸ್ತರಣಾ ಸಮಾಲೋಚಕ ಜಯಂತ ಪಟಗಾರ ಇವರುಗಳು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top