ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಯಕ್ಷಶಾಲ್ಮಲಾ ಸ್ವರ್ಣವಲ್ಲೀ, ದಿ.ಎಂ.ಎ.ಹೆಗಡೆ ಸಂಸ್ಮರಣಾ ಸಮಿತಿ ಇವರಿಂದ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಸಹಕಾರದೊಂದಿಗೆ ದಿ.ಎಂ.ಎ.ಹೆಗಡೆ ಸಂಸ್ಮರಣೆ ಮತ್ತು ಸುಧನ್ವಾರ್ಜುನ ಯಕ್ಷಗಾನ ತಾಳಮದ್ದಳೆ ಡಿ.29ರಂದು ಸಂಜೆ 6ಕ್ಕೆ ನಡೆಯಲಿದೆ.
ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್.ಭಟ್ಟ ಉಂಚಳ್ಳಿ ಅಧ್ಯಕ್ಷತೆವಹಿಸುವರು. ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆ ಕೆರಹೊಂಡ ಸಂಸ್ಮರಣಾ ನುಡಿ ಆಡಲಿದ್ದಾರೆ. ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ದಂದ್ರ ಹೆಗಡೆ ಉಪಸ್ಥಿತರಿರುತ್ತಾರೆ.
ನಂತರ ನಡೆಯುವ ಸುಧನ್ವಾರ್ಜುನ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಮಂಜುನಾಥ ಗುಡ್ಡೆದಿಂಬ, ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ ಕೆರೆಕೈ, ಡಾ.ಜಿ.ಎಲ್.ಹೆಗಡೆ ಕುಮಟಾ, ದಿವಾಕರ ಹೆಗಡೆ ಕೆರಹೊಂಡ, ಜಿ.ಕೆ.ಭಟ್ಟ ಕಶಿಗೆ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಕಟರು ತಿಳಿಸಿದ್ದಾರೆ.