• Slide
    Slide
    Slide
    previous arrow
    next arrow
  • ರಜತ ಶೇಟ್’ಗೆ ‘ಬಾಲವಿಜ್ಞಾನಿ’ ಪ್ರಶಸ್ತಿ ಪ್ರದಾನ

    300x250 AD

    ಸಿದ್ದಾಪುರ: ಸ್ಥಳೀಯ ಹಾಳದಕಟ್ಟಾದ ಪ್ರತಿಭಾವಂತ ವಿದ್ಯಾರ್ಥಿ ರಜತ ವಿನಾಯಕ ಶೇಟ್ ಈತನಿಗೆ ಸೊರಬದ ಶ್ರೀ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಬಾಲವಿಜ್ಞಾನಿ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.


    ಸೊರಬದ ರಂಗಮಂದಿರದಲ್ಲಿ ನಡೆದ ‘ರಾಜ್ಯ ಸುರಭಿ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ’ದಲ್ಲಿ ರಂಭಾಪುರಿ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ರಜತನಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಶುಕ್ರವಾರ ಆಶೀರ್ವದಿಸಿದರು.

    300x250 AD


    ಜಡೆ ಸಂಸ್ಥಾನ ಮುರುಘಾಮಠದ ಡಾ.ಮಹಾಂತಸ್ವಾಮಿಗಳು, ತೀರ್ಥಹಳ್ಳಿ ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಶಿಕಾರಿಪುರ ತಪೋಕ್ಷೇತ್ರದ ಶ್ರೀರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಶಾಂತಪುರ ಸಂಸ್ಥಾನಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಿದ್ದರು.


    ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಸುರಭಿವಾಣಿ ಪತ್ರಿಕೆಯ ಪ್ರಕಾಶಕ ಎಸ್.ಜಿ.ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.
    ರಜತ ಶೇಟ್ ವೈಜ್ಞಾನಿಕ ರೀತಿಯಲ್ಲಿ ಈಗಾಗಲೇ ಹಲವು ರೀತಿಯ ಉಪಯೋಗಿ ಪರಿಕರಗಳನ್ನು ಸೃಷ್ಟಿಸಿ ಬಹುಮಾನಗಳನ್ನು ಗಳಿಸಿಕೊಂಡಿದ್ದಾನೆ. ಈತನು ಸಿದ್ದಾಪುರದ ಬಂಗಾರ ಆಭರಣ ತಯಾರಿಕೆಯ ವಿನಾಯಕ ಶಂಕರ ಶೇಟ್ ಹಾಗೂ ಪುಷ್ಪಾ ಶೇಟ್ ಅವರ ಪುತ್ರ.

    Share This
    300x250 AD
    300x250 AD
    300x250 AD
    Leaderboard Ad
    Back to top