ಕುಮಟಾ: ಯುವಾ ಬ್ರಿಗೇಡ್ ಕುಮಟಾ ವತಿಯಿಂದ ತಾಲೂಕಿನ ಮಾತೃದೇವತೆ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಅಮ್ಮನಮನ ಹಾಗೂ ವಿವೇಕ ಮಾಲಾಧಾರಣೆ ಕಾರ್ಯಕ್ರಮ ನಡೆಯಿತು.
ಅಹೋರಾತ್ರಿ ದೇಶವನ್ನು ಕಾಯುವ ಯೋಧರ ಶೌರ್ಯ, ತ್ಯಾಗ ಬೆಲೆಕಟ್ಟಲಾಗದ್ದು ನಿಜ. ಆದರೆ ಮಕ್ಕಳ ಬರುವಿಕೆಯನ್ನು ಜಾತಕ ಪಕ್ಷಿಯಂತೆ ಕಾಯುವ ತಾಯಂದಿರ ತ್ಯಾಗ, ಧೈರ್ಯ ಯೋಧರ ತ್ಯಾಗಕ್ಕಿಂತ ಒಂದು ತೂಕ ಹೆಚ್ಚು. ಇಂತ ತಾಯಿಯಂದಿರ ಪಾದ ಪೂಜೆಯನ್ನು ಮಾಡಿ ಅವರಿಂದಲೇ ವಿವೇಕ ಮಾಲೆ ಧಾರಣೆಯನ್ನು ಮಾಡಲಾಯಿತು.
ಈ ಸಮಯದಲ್ಲಿ ಮಾಜಿ ಹಾಗೂ ಹಾಲಿ ಯೋಧರು, ಯೋಧರ ತಾಯಂದಿರು, ಬ್ರಿಗೇಡ್ ನ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು