
ಯಲ್ಲಾಪುರ: ಕೋವಿಡ್ ನಂತಹ ಕ್ಲಿಷ್ಟರಕ ಸಮಯದಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಾದ್ಯಂತ ಸುಮಾರು 63,000 ಬಡ ಕುಟುಂಬಗಳಿಗೆ ‘ಹೆಬ್ಬಾರ್ ರೇಷನ್ ಕಿಟ್’ ಹೆಸರಿನಡಿಯಲ್ಲಿ ದಿನಸಿ ಸಾಮಗ್ರಿಗಳನ್ನು ವಿತರಿಸಿ ಹಾಗೂ 30,000 ಮೆಡಿಕಲ್ ಕಿಟ್ ವಿತರಿಸಿ ಬಡವರ ಕಷ್ಟಗಳಿಗೆ ಧ್ವನಿಯಾದ ಕಾರ್ಮಿಕ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರನ್ನು ಯಲ್ಲಾಪುರ ನಾಗರಿಕರ ಪರವಾಗಿ ಪಟ್ಟಣದ ತಿಲಕ್ ಚೌಕನಲ್ಲಿ ಉದ್ಯಮಿ ಬಾಲಕೃಷ್ಣ ನಾಯಕ ಅವರ ನೇತೃತ್ವದಲ್ಲಿ ತಿಲಕ್ ಬಾಯ್ಸ್, ತಿಲಕ್ ಪರಿವಾರ ವತಿಯಿಂದ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಉದ್ಯಮಿಗಳಾದ ಬಾಲಕೃಷ್ಣ ನಾಯಕರು ಯಲ್ಲಾಪುರದ ನಾಗರಿಕರ ಪರವಾಗಿ ಸಚಿವರನ್ನು ಹಾಗೂ ಅವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್ ಹಾಗೂ ಪುತ್ರ ವಿವೇಕ್ ಹೆಬ್ಬಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ ಸದಸ್ಯ ಶಾಂತಾರಾಮ ಸಿದ್ದಿ, ಯುವ ನಾಯಕ ವಿವೇಕ ಹೆಬ್ಬಾರ್ ಉದ್ಯಮಿ ಬಾಲಕೃಷ್ಣ ನಾಯಕ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್, ಮಂಡಲ ಉಪಾಧ್ಯಕ್ಷ ಶಿರೀಷ್ ಪ್ರಭು ಹಾಗೂ ಪ್ರಮುಖ ಮುರಳಿ ಹೆಗಡೆ, ಭಾಸ್ಕರ ನಾರ್ವೇಕರ್ ಹಾಗೂ ಅಭಿಮಾನಿಗಳು ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.