ಹೊನ್ನಾವರ: ಯುವಾ ಬ್ರಿಗೇಡ್ ಹೊನ್ನಾವರ ಘಟಕವು ‘ಅಮ್ಮ ನಮನ’ ಎಂಬ ಕಾರ್ಯಕ್ರಮ ಆಯೋಜಿಸಿ ಯೋಧರ ತಾಯಿಯ ಪಾದಪೂಜೆ ಮಾಡುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಯಿತು.
ಯುವಾ ಬ್ರಿಗೇಡ್ ಪ್ರತಿಯೊಂದು ಆಚರಣೆಯನ್ನು ವಿಶೇಷವಾಗಿ ಆಚರಿಸುತ್ತಾ ಬಂದಿದ್ದು ಶ್ರೀ ಮಾತೆ ಶಾರದಾ ದೇವಿಯ ಜನ್ಮ ದಿನವನ್ನು “ಅಮ್ಮ ನಮನ” ಹೆಸರಿನಲ್ಲಿ ಆಚರಿಸುತ್ತಾ ಬಂದಿದೆ. ಅದೇ ರೀತಿ ಯುವಾ ಬ್ರಿಗೇಡ್ ಹೊನ್ನಾವರ ವತಿಯಿಂದ ಈ ಬಾರಿ ವಿಶೇಷವಾಗಿ ದೇಶ ಕಾಯುವ ಯೋಧ ಮೇಜರ್ ಹೆಚ್.ಡಿ.ಗಜರಾಜ್ ಅವರ ತಾಯಿಯವರಾದ ವಾಣಿ ಡಿ. ಭಟ್ ಇವರ ಪಾದಪೂಜೆ ಮಾಡುವ ಮೂಲಕ ಶ್ರೀ ಮಾತೆ ಶಾರದಾ ದೇವಿಯ ಜಯಂತಿಯನ್ನು ಆಚರಿಸಲಾಯಿತು.
ಗುರುವಾರ ಪಟ್ಟಣದ ವಿವೇಕಾನಂದ ಸೇವಾ ಕೇಂದ್ರದಲ್ಲಿ ಕಾರ್ಯಕ್ರಮ ಆಯೋಜಿಸಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮೇಜರ್ ಎಚ್.ಡಿ.ಗಜರಾಜ್ ಇವರನ್ನ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರು, ಯುವಾ ಬ್ರಿಗೇಡ್ ಕಾರ್ಯಕರ್ತರು ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಕಾರ್ಯಕರ್ತೆಯರು ಭಾಗವಹಿಸಿದ್ದರು.