• first
  second
  third
  previous arrow
  next arrow
 • ಮಂಕಿ ಪ.ಪಂಚಾಯತ್ ವ್ಯಾಪ್ತಿಯ ವಿವಿಧ ಸಮಸ್ಯೆ ಪರಿಹಾರಕ್ಕೆ ಆಗ್ರಹ; ರಾಜ್ಯಪಾಲರಿಗೆ ಮನವಿ

  300x250 AD

  ಹೊನ್ನಾವರ: ಮಂಕಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ರಿಕ್ಷಾ, ಟ್ಯಾಕ್ಸಿ ಚಾಲಕ-ಮಾಲಕರ ಸಂಘ, ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

  ತಾಲೂಕಿನ ಮಂಕಿಯಲ್ಲಿ ಈ ಹಿಂದೆ ಇದ್ದ 4 ಗ್ರಾಪಂಗಳಲ್ಲಿ 2 ಗ್ರಾಪಂ ಗಳನ್ನು ಸೇರಿಸಿ ಈಗಾಗಲೇ ಮಂಕಿ ಪಟ್ಟಣ ಪಂಚಾಯತ ಆಗಿ ಘೋಷಣೆ ಮಾಡಲಾಗಿದೆ. ಉಳಿದ ಎರಡು ಗ್ರಾಮ ಪಂಚಾಯತನ್ನು ಪಟ್ಟಣ ಪಂಚಾಯತ ವ್ಯಾಪ್ತಿಗೆ ಸೇರಿಸಿರುವುದರಿಂದ ಮಂಜೂರಿಯಾದ ಕ್ರಿಯಾ ಯೋಜನೆಯಲ್ಲಿ ಸೇರಿರುವ ಕಾಮಗಾರಿಗಳಾದ ಬಾವಿ, ಶೌಚಾಲಯ, ಇಂಗುಗುಂಡಿ, ಕೊಟ್ಟಿಗೆ ನಿರ್ಮಾಣ, ಕೃಷಿ ಹೊಂಡ, ಕೃಷಿ ಕಾಲುವೆ, ಮನೆ ಸಂಖ್ಯೆ ಬದಲಾವಣೆ, ಮನೆ ಸಂಖ್ಯೆ ನೀಡುವುದು, ಮನೆ ಮಂಜೂರಿಯ ಬಾಕಿ ಬಿಲ್‍ಗಳ ಪಾವತಿ ಸಮಸ್ಯೆಗಳನ್ನು ಹೊಗಲಾಡಿಸಬೇಕು. ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಮತ್ತು ಆಸ್ಪತ್ರೆಯಲ್ಲಿ ಒಬ್ಬರು ವೈದ್ಯಾಧಿಕಾರಿಗಳಿದ್ದು ಹೆಚ್ಚಿನ ವೈದ್ಯಾಧಿಕಾರಿಗಳನ್ನು, ಇತರೇ ಅವಶ್ಯ ಸಿಬ್ಬಂದಿಯನ್ನು ನೇಮಿಸಿ, ಸೌರ್ಕಯಗಳನ್ನು ಒದಗಿಸಿ ಜನರಿಗೆ ಪ್ರಯೋಜನ ಕಲ್ಪಿಸಬೇಕು. ಮಂಕಿ ಪ.ಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರ, ವಿದ್ಯಾರ್ಥಿಗಳ, ವಾಹನ ಸವಾರರ, ಉದ್ಯೋಗಿಗಳ ಸಾವಿರಾರು ಜನರ ದೈನಂದಿನ ಓಡಾಟಕ್ಕೆ ತೊಂದರೆ ಆಗಿರುವುದರಿಂದ ರಸ್ತೆಯನ್ನು ಬಹುಬೇಗ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

  300x250 AD

  ಮಂಕಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಇಡಗುಂಜಿ ಕ್ರಾಸ್‍ನಿಂದ ಅನಂತವಾಡಿವರೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಾದು ಹೋಗಿದ್ದು, ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಪಾರಂಭವಾಗಿದ್ದು, ಕೆಲಸ ಪಡೆದ ಗುತ್ತಿಗೆದಾರರು ಅಸಮರ್ಪಕ ಕೆಲಸ ಮಾಡುತ್ತಿರುವುದರಿಂದ ದಿನಕ್ಕೆ ಹಲವಾರು ವಾಹನಗಳ ಅಪಘಾತಕ್ಕೊಳಗಾಗಿ ಜನರು ಬಲಿಯಾಗುತ್ತಿದ್ದಾರೆ. ಹೀಗಾಗಿ ರಸ್ತೆ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಡಗುಂಜಿ ಕ್ರಾಸ್‍ನಿಂದ ಮಂಕಿಯವರೆಗೆ ದಾರಿ ದೀಪ, ರಸ್ತೆ ಅಗಲೀಕರಣ ಮಾಡಿ ಸೂಚನಾ ಫಲಕ ಅಳವಡಿಕೆ ಹಾಗೂ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು. ಮಂಕಿ ಪಟ್ಟಣ ಪಂಚಾಯ್ ಸಮೀಪ ಜಂಕ್ಷನ್ ಸರ್ಕಲ್ ನಿರ್ಮಿಸಬೇಕು. ಮಂಕಿ ಪಟ್ಟಣ ಪಂಚಾಯತ ವ್ಯಾಪ್ತಿಯ ಇಡಗುಂಜಿ ಕ್ರಾಸ್‍ನಿಂದ ಮಂಕಿ ಅನಂತವಾಡಿವರೆಗಿನ ಸಾವಿರಾರು ವಿದ್ಯಾರ್ಥಿಗಳು ಮುರ್ಡೇಶ್ವರ, ಶಿರಾಲಿ, ಭಟ್ಕಳ ಹಾಗೂ ಮಂಕಿಯಿಂದ ಸಾವಿರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್‍ಪಾಸ್ ನೀಡಿದೆ. ಆದರೆ ಬೆಳಗ್ಗೆ ಸಮಯದಲ್ಲಿ ನಿಗದಿತವಾಗಿ ಬಸ್ ವ್ಯವಸ್ಥೆ ಇಲ್ಲದೇ ಇಲ್ಲದಿರುವುದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಹಾಗೂ ರಾಜ್ಯದ ಪ್ರತಿಯೊಂದು ಘಟಕದ ಬಸ್ ಮಂಕಿ ಆಸ್ಪತ್ರೆಯ ಹಾಗೂ ಮಂಕಿ ಮಾವಿನಕಟ್ಟ ಬಳಿ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

  ತಾ.ಪಂ. ಮಾಜಿ ಸದಸ್ಯ ರಾಜು ನಾಯ್ಕ, ಅಣ್ಣಪ್ಪ ನಾಯ್ಕ, ಶಂಕರ ನಾಯ್ಕ, ಲಂಬು ಗೌಡ, ರಾಮಾ ನಾಯ್ಕ, ಹರೀಶ್ ನಾಯ್ಕ, ಮಂಜುನಾಥ್ ನಾಯ್ಕ, ಸುಬ್ರಹ್ಮಣ್ಯ ನಾಯ್ಕ, ನಾಗೇಶ್ ನಾಯ್ಕ, ಈಶ್ವರ್ ನಾಯ್ಕ, ಪಕೀರ ಜಿಕ್ರಿಯ ಸಾಬ್, ಬಾಬು ನಾಯ್ಕ ಹಾಗೂ ರಿಕ್ಷಾ ಚಾಲಕ ಮಾಲಕರು, ಸಾರ್ವಜನಿಕರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top