ಕಾರವಾರ: ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಲವಂತದ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಿ ಜನರಿಗೆ ಕೊಟ್ಟ ಭರವಸೆ ಉಳಿಸಿಕೊಂಡಿದೆ. ಈ ಮೂಲಕ ವ್ಯವಸ್ಥಿತ ಸಮಾಜ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಧಾರ್ಮಿಕ ಸ್ವಾತಂತ್ರ‍್ಯ ಹಕ್ಕು ವಿಧೇಯಕ ಜಾರಿಗೊಳಿಸಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ಸಹ ವಕ್ತಾರ ಸದಾನಂದ ಭಟ್ಟ ನಿಡಗೋಡ ಹೇಳಿದರು.
ಸರ್ಕಾರ ಮಂಡಿಸಿದ ಮಸೂದೆ ಮತಾಂತರ ನಿಷೇಧ ಕಾಯ್ದೆ ಎಂಬುದು ತಪ್ಪು ಕಲ್ಪನೆ. ಇದು ಪ್ರತಿಯೊಬ್ಬರ ಧಾರ್ಮಿಕ ಸ್ವಾತಂತ್ರ‍್ಯ ಕಾಯ್ದುಕೊಳ್ಳಲು ಅನುಕೂಲ ಮಾಡಿಕೊಡುವ ಕಾಯ್ದೆ ಸ್ವಇಚ್ಛೆಯಿಂದ ಮತಾಂತರಗೊoಡರೆ ಅಡ್ಡಿ ಇಲ್ಲ. ಹಿಂದೂಯೇತರರ ಜತೆ ವಿವಾಹಕ್ಕೂ ಈ ಮುಂಚಿನoತೆ ಅವಕಾಶ ಮಾಡಿಕೊಡಲಾಗಿದೆ ಎಂದರು.
ಮತಬ್ಯಾoಕ್ ದೃಷ್ಟಿಯಲ್ಲಿಟ್ಟುಕೊಳ್ಳುವ ಕಾಂಗ್ರೆಸ್, ಸರ್ಕಾರದ ವಿರುದ್ಧ ಅನಗತ್ಯ ಅಪಪ್ರಚಾರ ಮಾಡುತ್ತಿದೆ. ಯಾವುದೇ ಕಾಯ್ದೆ ಜಾರಿಗೆ ಬಂದರೂ ಅದನ್ನು ಚುನಾವಣೆ ದೃಷ್ಟಿಯಲ್ಲಿಟ್ಟು ನೋಡುವುದು ಅವರ ಜಾಯಮಾನ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಮತ ತಮ್ಮ ಸ್ವತ್ತು ಎಂಬ ತಪ್ಪು ಕಲ್ಪನೆಯಲ್ಲಿ ಕಾಂಗ್ರೆಸ್ಸಿಗರಿದ್ದಾರೆ. ಅಲ್ಪಸಂಖ್ಯಾತರ ಏಳ್ಗೆ ಬದಲು ಬಿಜೆಪಿ ಬಗ್ಗೆ ಅವರಲ್ಲಿ ಭಯ ಹುಟ್ಟಿಸುವ ಕೃತ್ಯದಲ್ಲಷ್ಟೆ ಅವರು ತೊಡಗುತ್ತಾರೆ ಎಂದು ಟೀಕಿಸಿದರು.
ಸರ್ಕಾರ ಅತಿವೃಷ್ಟಿ ಹಾನಿಗೆ ಪ್ರತಿ ಹೆಕ್ಟೇರ್ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸಿದೆ. ಇದು ರೈತರ ಪರ ಕಾಳಜಿ ಇದೆ ಎಂಬುದನ್ನು ತೋರಿಸಿದೆ ಎಂದರು. ಗೋಷ್ಠಿಯಲ್ಲಿ ರಘುಪತಿ ಭಟ್, ನಾಗರಾಜ ನಾಯ್ಕ, ಡ್ಯಾನಿ ಡಿಸೋಜಾ, ಶ್ರೀರಾಮ ನಾಯ್ಕ, ರವಿ ಶೆಟ್ಟಿ ಇದ್ದರು.