ಶಿರಸಿ: ಶಿರಸಿಯ ಸಾಹಿತ್ಯ ಚಿಂತಕರ ಚಾವಡಿಯ ಅಶ್ರಯದಲ್ಲಿ, ಇದೇ ಬರುವ ಡಿ.28 ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಗರದ ನೆಮ್ಮದಿ ಕುಟೀರದಲ್ಲಿ ‘ಆಡುಭಾಷಾ ಕವಿಗೋಷ್ಠಿ’ ಯನ್ನು ಆಯೋಜಿಸಲಾಗಿದೆ.
ಬರಹಗಾರ ದಿವಸ್ಪತಿ ಭಟ್ ರವರು ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಕವಿ ವಾಸುದೇವ ಶಾನಭಾಗರವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಹಿರಿಯ ಕಥೆಗಾರ ಡಿ.ಎಸ್.ನಾಯ್ಕ ಸಭಾಧ್ಯಕ್ಷತೆ ವಹಿಸುವರು. ಉಳಿದಂತೆ ಚಿಂತನ ಚಾವಡಿಯ ಗೌರವಾಧ್ಯಕ್ಷ ಎಸ್.ಎಸ್.ಭಟ್ ಕಥೆಗಾರ ಕೆ.ಮಹೇಶ, ದತ್ತಗುರು ಕಂಠಿ, ವಿಮಲಾ ಭಾಗ್ವತ್, ಮಹೇಶ ಹೆಗಡೆ ಸಿದ್ದಾಪುರ ಉಪಸ್ಥಿತರಿರುವರು.