ಶಿರಸಿ: ಉತ್ತರಕನ್ನಡದ ಪ್ರವಾಸೋದ್ಯಮದಲ್ಲಿ ತನ್ನದೇ ಛಾಪು ಮೂಡಿಸುತ್ತ ಮಲೆನಾಡ ಸೊಬಗನ್ನು ಅರಸಿ ಬಂದ ಪ್ರವಾಸಿಗರಿಗೆ ಅಪ್ಪಟ ಮಲೆನಾಡಿ ಪರಿಚಯ ಮಾಡಿಕೊಡುವುದಲ್ಲದೇ ಭೇಟಿ ನೀಡುವ ಪ್ರತೀ ಪ್ರವಾಸಿಗನಿಗೆ ಪ್ರಕ್ರತಿಯ ಕುರಿತಾಗಿ ಪ್ರೀತಿ ಮೂಡುವಂತೆ ಮಾಡಿ ತನ್ಮೂಲಕ ಮುಂದಿನ ಪೀಳಿಗೆಯ ಪರಿಸರ ಪ್ರೇಮಿಗಳನ್ನು ನಿರ್ಮಿಸುವ ಕಾಯಕದಲ್ಲಿ ‘ತವರುಮನೆ ಹೋಂ ಸ್ಟೇ’ ಕಾರ್ಯನಿರತವಾಗಿದೆ.
ಕಳೆದ ಏಳು ವರ್ಷಗಳಿಂದ ಮಲೆನಾಡ ಸೊಗಡಿನೊಂದಿಗೆ ವಿಶೇಷ ರೀತಿಯಲ್ಲಿ ಪ್ರವಾಸಿಗರನ್ನು ಉಪಚರಿಸುತ್ತಿದೆ ತವರುಮನೆ ಹೊಂಸ್ಟೇ. ಮಳೆಹಬ್ಬ, ಬೇಸಿಗೆ ಶಿಬಿರ, ಚಾರಣಗಳೊಟ್ಟಿಗೆ ಎಲ್ಲರಲ್ಲೂ ಪ್ರಕೃತಿಯ ಸೊಬಗನ್ನು ಪರಿಚಯಿಸುತ್ತಾ, ಪರಿಸರದ ಸ್ವಾಸ್ಥ್ಯದ ಬಗೆಗೂ ಅರಿವು ಮೂಡಿಸುತ್ತಾ ಋತುಮಾನದ ಅಡಿಗೆಯ ಮೂಲಕ ಜನಮೆಚ್ಚುಗೆಗೆ ಪಾತ್ರವಾಗಿದೆ ‘ತವರುಮನೆ’ ಹೋಂ ಸ್ಟೇ.
ಪ್ರತೀ ವರ್ಷವೂ ಮಲೆನಾಡಿನ ವಿಶೇಷತೆಗಳಲ್ಲೊಂದಾದ ಆಲೇಮನೆಹಬ್ಬವನ್ನು ಆಯೋಜಿಸುವ ಮೂಲಕವೂ ಗಮನವನ್ನು ಸೆಳೆದಿದೆ. ಪ್ರಸ್ತುತ ಸತತ ಮೂರು ವರ್ಷಗಳ ಯಶಸ್ವಿ ಆಯೋಜನೆಯು ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ.
ಡಿ. 25 2021 ರಿಂದ 2 ನೇ ಜನೆವರಿ 2022 ರ ವರೆಗೆ ನಡೆಯುವ ‘ಆಲೇಮನೆಹಬ್ಬ’ ದಲ್ಲಿ ವಿವಿಧ ಬಗೆಯ ಕಬ್ಬಿನ ಹಾಲು, ಬಿಸಿಯಾದ ನೊರೆಬೆಲ್ಲ, ಬಗೆಬಗೆಯ ತಿನಿಸುಗಳಿಂದ ಜನರನ್ನು ಸತ್ಕರಿಸಲು ಸಜ್ಜಾಗಿದೆ. ಶಿರಸಿಯ ವಾನಳ್ಳಿಗೆ ಹತ್ತಿರವಿರುವ ತವರುಮನೆ ಹೋಂಸ್ಟೇ, ಆಲೇಮನೆ ಹಬ್ಬಕ್ಕೆ 99 ರೂಪಾಯಿಗಳ ಪ್ರವೇಶ ಶುಲ್ಕವನ್ನು ಒಬ್ಬರಿಗೆ ನಿಗದಿಪಡಿಸಲಾಗಿದೆ. ಡಿಸೆಂಬರ್ 25 ಕ್ಕೆ ಉದ್ಘಾಟನಾ ಸಮಾರಂಭವು ನಡೆಯಲಿದ್ದು, 26ಕ್ಕೆ ‘ನಾದಸಂಧ್ಯಾ’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಪ್ರತಿದಿನವೂ ಸಾಯಂಕಾಲ 4 ರಿಂದ 9 ರ ವರೆಗೆ, ಕೋವಿಡ್ ನಿಯಮಕ್ಕನುಸಾರವಾಗಿ ಆಲೇಮನೆಯು ಲಭ್ಯವಿರುತ್ತದೆ