ಶಿರಸಿ: ಸಮಸ್ಯೆಯಾಗುತ್ತಿರುವ ಕೋನೆ ಕೋಯ್ಲು ಸಮಸ್ಯೆ ನೀಗಿಸಲು ದೋಟಿ ಚಾಲನಾ ಕೌಶಲ್ಯ ತರಬೇತಿ ಅಗತ್ಯ. ರೈತರ ಸಂಕಷ್ಟಕ್ಕೆ ಸೊಸೈಟಿಗಳು ದೋಟಿ ಮೂಲಕ ಕೊನೆ ಕೋಯ್ಲಿನ ಕುಶಲಕರ್ಮಿಗಳಿಗೂ ಬೆನ್ನೆಲಬಾಗಿ ನಿಲ್ಲಬೇಕು ಎಂದು ನಾಣಿಕಟ್ಟ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಬಿ.ಹೆಗಡೆ ಮತ್ತೀಹಳ್ಳಿ ಹೇಳಿದರು.
ಶುಕ್ರವಾರ ಅವರು ತಾಲೂಕಿನ ಬೆಳ್ಳೇಕೇರಿಯಲ್ಲಿ ಕಾನಗೋಡ ಸೇವಾ ಸಹಕಾರಿ ಸಂಘ ಹಾಗೂ ಕೃಷಿ ವೇದಿಕೆ ಜಂಟಿಯಾಗಿ ಹಮ್ಮಿಕೊಂಡ ಕೊನೆ ಕೋಯ್ಲು ನಡೆಸುವ ದೋಟಿ ಚಾಲನಾ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಅಡಿಕೆ ಕೋಯ್ಲಿನ ಸಮಸ್ಯೆ ನೀಗಿಸಿ, ಆತಂಕ ತಪ್ಪಿಸಲು ಸಾಧ್ಯವಿದೆ. ನಾಣಿಕಟ್ಟ ಸೊಸೈಟಿ ಯಿಂದ ಕಳೆದ ವರ್ಷ 75 ಸಾವಿರ ಕೊನೆ ಕೋಯ್ಲು ನಡೆಸಿದ್ದೇವೆ. ಈ ಬಾರಿ 2 ಲಕ್ಷ ಕೊನೆ ಕೋಯ್ಲಿನ ಗುರಿ ಇದೆ. ಅಶಕ್ತ ಸದಸ್ಯರ ಕೊನೆ ಕೋಯ್ಲು ದೋಟಿ ಬಳಕೆ ಮೂಲಕ ನಡೆಸಲು ಸಹಕಾರಿ ಸಂಘ ಮುಂದಾಗಬೇಕು ಎಂದರು.
ದೋಟಿ ಕೋಯ್ಲಿನಲ್ಲಿ ಒಂದು ದಿನದಲ್ಲಿ ಪ್ರಾಥಮಿಕ ಮಾಹಿತಿ ಮಾತ್ರ ಸಿಗುತ್ತದೆ. ಹದಿನೈದು ದಿನದಲ್ಲಿ ಪೂರ್ಣ ಅರಿಯಬಹುದು. ಮೊದಲು ಕತ್ತು ನೋವು ಬಂದರೂ ನಂತರ ಸಮಸ್ಯೆ ಇರಲ್ಲ. ಸಾಪ್ಟ್ ವೇರ ಇಂಜನೀಯರ್ ದುಡಿಯುವಷ್ಟು ಸಂಬಳ ಪಡೆಯಲು ಇಲ್ಲಿ ಸಾಧ್ಯವಿದೆ. ಪದವಿ ಪಡೆದವರೂ ಕೊನೆ ಕೋಯ್ತಿದ್ದಾರೆ. ಡ್ರೆಸ್ ಕೋಡ್, ಹೆಲ್ಮೆಟ್, ಕಣ್ಣಿಗೆ ಕಣ್ಣಡಕ ನೀಡಲಾಗುತ್ತದೆ. ಸೊಸೈಟಿಯಿಂದ ಇನ್ಸುರೆನ್ಸ, ಕಡಿಮೆ ಬಡ್ಡಿ ದರದ ಸಾಲ ಕೂಡ ನಾಣಿಕಟ್ಟ ಸೊಸೈಟಿ ದೋಟಿ ಕುಶಲಕರ್ಮಿಗಳಿಗೆ ನೀಡಲಾಗುತ್ತದೆ ಎಂದರು.
ಭೈರುಂಬೆ ಸೊಸೈಟಿ ಅಧ್ಯಕ್ಷ ವಿ.ಎಸ್.ಹೆಗಡೆ ಕೆಶಿನ್ಮನೆ, ದೋಟಿ ತಂತ್ರಜ್ಞ ಸುಬ್ರಹ್ಮಣ್ಯಂ ಹಾಸನ, ಯಡಹಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೆಕೇರಿ, ಕಾರ್ಯದರ್ಶಿ ಮುರಳೀಧರ ಹೆಗಡೆ ಇತರರು ಇದ್ದರು. ಅನಂತ ಭಟ್ಟ ಕರಸುಳ್ಳಿ ನಿರ್ವಹಿಸಿದರು. ಆರ್.ಜಿ.ಹೆಗಡೆ ಮುರೂರು ಮಾಡಿದರು. 20ಕ್ಕೂ ಅಧಿಕ ಆಸಕ್ತ ಕುಶಲಕರ್ಮಿಗಳು ತರಬೇತಿ ಪಡೆದರು.
ಬೆಳಿಗ್ಗೆ 10ಕ್ಕೆ ಬರೋದಲ್ಲ. ಬೆಳಿಗ್ಗೆ 8ಕ್ಕೆ ತೋಟದಲ್ಲಿ ಇರಬೇಕು. ವ್ಯವಸ್ಥಿತ ಸಂಬಳ ಪಡೆಯಬಹುದು. – ಎನ್.ಬಿ.ಹೆಗಡೆ, ಮತ್ತಿಹಳ್ಳಿ, ನಾಣಿಕಟ್ಟ ಸೊಸೈಟಿ ಅಧ್ಯಕ್ಷ