Slide
Slide
Slide
previous arrow
next arrow

ದೇಶದ ಜನಸಂಖ್ಯೆಯ ಶೇ.60 ಕ್ಕಿಂತ ಅಧಿಕ ಮಂದಿ ಕೊರೊನಾ ಎರಡು ಲಸಿಕೆ ಪಡೆದಿದ್ದಾರೆ; ಸಚಿವ ಮಾಂಡವೀಯಾ

300x250 AD


ನವದೆಹಲಿ: ಭಾರತದಲ್ಲಿ ಅರ್ಹ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಜನರು ಈಗ ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯಾ ಅವರು ತಿಳಿಸಿದ್ದಾರೆ.


`ಸಾರ್ವಜನಿಕ ಸಹಭಾಗಿತ್ವ ಮತ್ತು ಆರೋಗ್ಯ ಕಾರ್ಯಕರ್ತರ ಸಮರ್ಪಿತ ಪ್ರಯತ್ನಗಳ ನೆರವಿನಿಂದಾಗಿ ದೇಶದ 60 ಪ್ರತಿಶತದಷ್ಟು ಅರ್ಹ ಜನಸಂಖ್ಯೆಯು ಈಗ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದೆ’ ಎಂದು ಅವರು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದುವರೆಗೆ ದೇಶದಲ್ಲಿ ನೀಡಲಾದ ಒಟ್ಟು ಲಸಿಕೆ ಡೋಸದ 139.70 ಕೋಟಿ ಮೀರಿದೆ ಎಂದು ಸಚಿವಾಲಯ ತಿಳಿಸಿದೆ.

ಕೊರೋನಾವೈರಸ್ ವಿರುದ್ಧ ವಿಶ್ವದ ಅತೀದೊಡ್ಡ ಮತ್ತು ಅತೀವೇಗದ ಲಸಿಕಾ ಅಭಿಯಾನವನ್ನು ನಡೆಸುತ್ತಿರುವ ಭಾರತ ಕ್ಷಿಪ್ರಗತಿಯಲ್ಲಿ 60% ಜನರಿಗೆ ಲಸಿಕೆ ನೀಡಿದ್ದು ಒಂದು ಮಹತ್ವದ ಮೈಲಿಗಲ್ಲಾಗಿದೆ. ಓಮಿಕ್ರಾನ್ ಭೀತಿಯ ನಡುವೆ ಕೆಲವು ರಾಜ್ಯಗಳು ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲು ಮುಂದಾಗಿವೆ.

300x250 AD

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವುದರೊಂದಿಗೆ ದೇಶಾದ್ಯಂತ ಲಸಿಕೆ ಅಭಿಯಾನವನ್ನು ಜನವರಿ 16 ರಂದು ಪ್ರಾರಂಭಿಸಲಾಯಿತು. ಮುಂಚೂಣಿ ಕಾರ್ಯಕರ್ತರ ವ್ಯಾಕ್ಸಿನೇಷನ್ ಫೆಬ್ರವರಿ 2 ರಿಂದ ಪ್ರಾರಂಭವಾಯಿತು. ನಂತರ ಹಂತದ ವ್ಯಾಕ್ಸಿನೇಷನ್ ಮಾರ್ಚ್ 1 ರಿಂದ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮತ್ತು 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಕಾಯಿಲೆ ಹೊಂದಿದ ಜನರಿಗೆ ಪ್ರಾರಂಭವಾಯಿತು.

ದೇಶವು ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ಜನರಿಗೆ ಲಸಿಕೆಯನ್ನು ಪ್ರಾರಂಭಿಸಿತು. ನಂತರ ಸರ್ಕಾರವು ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಅವಕಾಶ ನೀಡುವ ಮೂಲಕ ಲಸಿಕೆ ಅಭಿಯಾನವನ್ನು ವಿಸ್ತರಿಸಲು ನಿರ್ಧರಿಸಿತು.

Share This
300x250 AD
300x250 AD
300x250 AD
Back to top