• Slide
  Slide
  Slide
  previous arrow
  next arrow
 • ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿ; ಡಿ.29, 30ಕ್ಕೆ ದೇಹದಾರ್ಢ್ಯತೆ ಪರೀಕ್ಷೆ

  300x250 AD

  ಕಾರವಾರ: ಜಿಲ್ಲಾ ಪೊಲೀಸ್ ಘಟಕದ ಸಿವಿಲ್ ಪುರುಷ, ಮಹಿಳಾ ಕಾನ್‌ಸ್ಟೆಬಲ್‌ಗಳ ಹುದ್ದೆಗಳ ನೇಮಕಾತಿಗೆ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಯು ಡಿ.29 ಮತ್ತು 30ರಂದು ಬೆಳಿಗ್ಗೆ 7ಕ್ಕೆ ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ.

  ಅರ್ಹ ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ ಪ್ರವೇಶ http://recruitment.ksp.gov.in ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಅದನ್ನು ಡೌನ್‌ಲೋಡ್ ಮಾಡಿ ಕೊಂಡು, ದೈಹಿಕ ಪರೀಕ್ಷೆಯ ದಿನದಂದು ಕಡ್ಡಾಯವಾಗಿ ಹಾಜರುಪಡಿಸಬೇಕು. ತಪ್ಪಿದಲ್ಲಿ ದೈಹಿಕ ಪರೀಕ್ಷೆಗೆ ಒಳಪಡಿಸಲಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.

  300x250 AD

  ವದಂತಿಗೆ ಕಿವಿಗೊಡಬೇಡಿ: ಯಾರಾದರೂ ನೌಕರಿ ಕೊಡಿಸುವುದಾಗಿ ಆಮಿಷವೊಡ್ಡುವ ದಲ್ಲಾಳಿಗಳ ವದಂತಿಗಳಿಗೆ ಕಿವಿಗೊಡಬಾರದು. ಅಂತಹ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಕಾರವಾರದ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಮೊ.9480805200, 08382-226550.

  ಭ್ರಷ್ಟಾಚಾರದ ಕುರಿತು ದೂರುಗಳಿದ್ದರೆ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ನೇಮಕಾತಿ, ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳೂರು – 560001. ದೂರವಾಣಿ ಸಂಖ್ಯೆ: 080-22943650 ಅಥವಾ ಪೊಲೀಸ್ ಉಪ ಮಹಾನಿರೀಕ್ಷಕರು, ನೇಮಕಾತಿ, ಕಾರ್ಲಟನ್ ಭವನ, ಅರಮನೆ ರಸ್ತೆ, ಬೆಂಗಳೂರು -560001. ದೂ: 080 2294 2261 ಎಂದು ಪ್ರಕಟಣೆ ತಿಳಿಸಿದೆ.

  Share This
  300x250 AD
  300x250 AD
  300x250 AD
  Leaderboard Ad
  Back to top