• first
    second
    third
    previous arrow
    next arrow
  • ಪ್ರಗತಿ ಶಿಕ್ಷಣ ಸಂಸ್ಥೆಯಿಂದ ದಿವ್ಯಾಂಗ ಮಕ್ಕಳಿಗೆ ತಟ್ಟೆ-ಲೋಟ-ಸಿಹಿ ವಿತರಣೆ

    300x250 AD

    ಶಿರಸಿ: ತಾಲೂಕಿನ ಕಿವುಡ ಮೂಕರ ಶಾಲೆಗೆ ಪ್ರಗತಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ತಮ್ಮ ಸಿಬ್ಬಂದಿಗಳೊಂದಿಗೆ ಕಾಲೇಜಿನ ಮಕ್ಕಳೊಂದಿಗೆ ಡಿ.23 ರಂದು ಭೇಟಿ ನೀಡಿದರು.


    ಶಾಲೆಯ ಕಾರ್ಯದರ್ಶಿ ಎಮ್ ಎಮ್ ಭಟ್ ಕಾರೆಕೊಪ್ಪ ಸ್ವಾಗತಿಸಿ ಸಂಸ್ಥೆಯ ಚಟುವಟಿಕೆಗಳನ್ನು ವಿವರಿಸಿದರು. ಪ್ರಗತಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


    ಪ್ರಗತಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಪರವಾಗಿ ಶಿಕ್ಷಕ ಎಸ್.ಎಸ್ ಹೆಗಡೆಯವರು ಅಲ್ಲಿನ ದಿವ್ಯಾಂಗ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತ ಹುಟ್ಟಿನಿಂದ ದಿವ್ಯಾಂಗನಾದರೂ ಕೂಡ ಬದುಕನ್ನು ಹೇಗೆ ಎದುರಿಸಬೇಕೆಂಬ ಸಾಮಾನ್ಯ ಪಾಠವನ್ನು ಈ ಮಕ್ಕಳಿಂದ ನಾವು ಕಲಿಯಬೇಕೆಂದು ವಿವರಿಸಿದರು.

    300x250 AD


    ಪ್ರಾಂಶುಪಾಲ ರಾಜು ಎನ್. ಕದಂ ಅವರು ಬುದ್ದಿ ಶಕ್ತಿಯನ್ನು ಹೆಚ್ಚಿಸುವಂತಹ ತಂತ್ರಗಳನ್ನ ಬೋಧಿಸಿದರು. ನಿಮ್ಮಲ್ಲಿರುವ ಅದ್ಭುತ ಶಕ್ತಿಯಿಂದ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದರು.

    ಕಿವುಡ ಮೂಕರ ಶಾಲೆಯ ಮಕ್ಕಳಿಗೆ ರಾಜು ಎನ್. ಕದಂ ಇವರು ಪ್ರಗತಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ವತಿಯಿಂದ ಉಚಿತವಾಗಿ ತಟ್ಟೆ, ಲೋಟ ಮತ್ತು ಸಿಹಿ ತಿನಿಸುಗಳನ್ನು ವಿತರಿಸಿದರು. ಸಹ ಶಿಕ್ಷಕ ಎಸ್ ಎಸ್ ಹೆಗಡೆ, ಭರತ್ ಎಮ್, ಶಶಾಂಕ್, ಅಶ್ವಿನಿ, ವೈಷ್ಣವಿ ಯವರು 30 ವಿದ್ಯಾರ್ಥಿಗಳಿಗೆ ತಟ್ಟೆ ಲೋಟ ಮತ್ತು ಸಿಹಿ ತಿನಿಸುಗಳನ್ನು ವಿತರಿಸಲು ಸಹಕರಿಸಿದರು.

    Share This
    300x250 AD
    300x250 AD
    300x250 AD
    Back to top