• Slide
    Slide
    Slide
    previous arrow
    next arrow
  • ಹೊನ್ನಾವರದಲ್ಲಿ ಜನಸಂಪರ್ಕ ಸಭೆ ಯಶಸ್ವಿ

    300x250 AD

    ಹೊನ್ನಾವರ: ಪಟ್ಟಣದ ಪ್ರತಿಭೋದಯದಲ್ಲಿ ಜನಸಂಪರ್ಕ ಸಭೆ ಹಾಗೂ ಗಣೇಶೋತ್ಸವ ಸಮಿತಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್ ಮಾತನಾಡಿ ಇಲಾಖೆಗಳು ಸದಾ ಜನರ ಎಳ್ಗೆಗಾಗಿ ಅವರ ಒಳಿತಿಗಾಗಿದೆ. ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಉತ್ತಮವಾಗಿ ಸ್ಪಂದಿಸಿ ಎಂದರು. ಜನಸಂಪರ್ಕ ಕಾರ್ಯಕ್ರಮಗಳು ಹೆಚ್ಚು ನಡೆದಾಗ ಅದರ ಪ್ರಯೋಜನ ಪಡೆದು ಸುತ್ತಮುತ್ತಲಿನ ಅಪರಾಧ ಚಟುವಟಿಕೆಗಳ ಬಗ್ಗೆ ಧೈರ್ಯವಾಗಿ ಮಾಹಿತಿ ನೀಡಿ ಎಂದು ಕರೆ ನೀಡಿದರು.

    ಸಿಪಿಐ ಶ್ರೀಧರ್ ಎಸ್.ಆರ್ ಮಾತನಾಡಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯವಿದೆ. ಮರಳು ಮಾಫಿಯಾದ ಬಗ್ಗೆ ಜನರ ದೂರುಗಳ ಹಿನ್ನಲೆ ಅಕ್ರಮ ಮರಳು ತಡೆಗಾಗಿ ಸ್ಯಾಂಡ್ ಸ್ಕ್ವಾಡ್ ನಿಯೋಜನೆಯಾಗಿದೆ. ಗ್ರಾಮಗಳಲ್ಲಿ ಪ್ರತಿ ತಿಂಗಳು ಬೀಟ್ ಸಭೆ ನಡೆಯುತ್ತಿದೆ. ದನಗಳ್ಳರ ಬಗ್ಗೆ ಜನರಿಂದ ಮಾಹಿತಿ ಅಗತ್ಯ. ಗೋ ಸಾಕುವವರು ಆಕಳನ್ನು ರಸ್ತೆಯಲ್ಲಿ ಬಿಟ್ಟು ತೆರಳಬೇಡಿ ಇದರಿಂದ ಅಪಘಾತಗಳು ಹೆಚ್ಚಾಗುತ್ತದೆ ಎಂದರು.

    300x250 AD

    ಅಧ್ಯಕ್ಷತೆ ವಹಿಸಿದ್ದ ಎಸ್ಪಿ ಡಾ.ಸುಮನ್.ಡಿ.ಪೆನ್ನೆಕರ್ ಮಾತನಾಡಿದರು. ಘಟನೆಯ ನೈಜ ಕಾರಣಗಳನ್ನು ಮರೆಮಾಚಿ ಬೇರೆ ರೀತಿಯೆ ಸಂಗತಿ ಸ್ರಷ್ಟಿಸುತ್ತಾರೆ. ಅಧಿಕಾರಿಗಳ ಸಮಯದ ಜೊತೆ ಚೆಲ್ಲಾಟವಾಡಬೇಡಿ. ಯಾವುದೇ ಹಿನ್ನಲೆ ಅಥವಾ ಪ್ರಭಾವ ಇದೆಯೆಂದು ಬಿಂಬಿಸಲು ಪ್ರಯತ್ನಿಸದಿರಿ ಎಂದರು. ಯಾವಾಗಲೂ ಉತ್ತಮ ವಿಚಾರಗಳಿಗೆ ಊರಿನ ಹೆಸರು ಪ್ರಜ್ವಲಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿರುತ್ತದೆ ಎಂದರು. ಹೊನ್ನಾವರ ಪೊಲೀಸ್ ಠಾಣೆಯವರು ಉತ್ತಮ ಗಣೇಶೋತ್ಸವ ಆಚರಿಸದವರಿಗೆ ಪ್ರಶಸ್ತಿ ವಿತರಿಸಿರುವುದು ಶ್ಲಾಘನೀಯ. ಈ ಕಾರ್ಯಕ್ರಮ ಜಿಲ್ಲೆಯ ಇತರ ತಾಲೂಕಿನ ಪೊಲೀಸ್ ಠಾಣೆಗಳಿಗು ವಿಸ್ತರಿಸಲು ಪ್ರಯತ್ನಿಸುತ್ತೇವೆ ಎಂದರು.

    ಗೌರಿಗಣೇಶ ಹಬ್ಬವನ್ನು ಮಾದರಿಯಾಗಿ ಆಚರಿಸಿದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರಿಗೆ ಬಹುಮಾನ ವಿತರಿಸಲಾಯಿತು. ಹೊನ್ನಾವರ ಪಟ್ಟಣದ ವಿಶ್ವಹಿಂದೂಪರಿಷತ್ ಗಣೇಶೋತ್ಸವ ಸಮಿತಿ ಪ್ರಥಮ ಬಹುಮಾನವನ್ನು, ಮಂಕಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ದ್ವಿತೀಯ ಸ್ಥಾನವನ್ನು, ಉಪ್ಪೋಣಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ತೃತೀಯ ಬಹುಮಾನವನ್ನು ಪಡೆದರು. ಚಂದಾವರದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಸೌಹಾರ್ದಯುತ ಗಣೇಶೋತ್ಸವ ಆಚರಣೆಗಾಗಿ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರತಿಕೂಲ ಸನ್ನಿವೇಶಗಳಲ್ಲಿ ಸಾರ್ವಜನಿಕರ ನೆರವಿಗೆ ದಾವಿಸಿದ ಹಲವರಿಗೆ ಉತ್ತಮ ಸ್ವಯಂ ಸೇವಕ ಪ್ರಶಸ್ತಿ ನೀಡಿ ಹುರಿದುಂಬಿಸಿದರು.

    ವೇದಿಕೆಯಲ್ಲಿ ಭಟ್ಕಳ ಸಿಪಿಐ ಮಹಾಬಲೇಶ್ವರ ನಾಯ್ಕ, ತಹಶಿಲ್ದಾರ ನಾಗರಾಜ ನಾಯ್ಕಡ್, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಸುರೇಶ್ ನಾಯ್ಕ, ಪಿಎಸೈ ಶಶಿಕುಮಾರ್. ಸಿ.ಆರ್, ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top