ಹೊನ್ನಾವರ: ಶರಾವತಿ ಸಾಂಸ್ಕೃತಿಕ ವೇದಿಕೆ ಹೊನ್ನಾವರ ನಡೆಸುವ 15ನೇ ವರ್ಷದ ಶರಾವತಿ ಉತ್ಸವ ಹೊನ್ನಾವರ ತಾಲೂಕಿನ ಸಂತೆಗುಳಿ ಮಹಾಸತಿ ಕ್ರೀಡಾಂಗಣದಲ್ಲಿ ಡಿಸೆಂಬರ್.25ರಂದು ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ ಹೇಳಿದರು.
ಅವರು ಹೊನ್ನಾರ ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದೇ ಪ್ರಥಮ ಬಾರಿಗೆ ತಾಲೂಕಿನ ಸಂತೆಗುಳಿಯಲ್ಲಿ ಶರಾವತಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ. ಡಿ.25 ಶನಿವಾರ ಸಂಜೆ 5:30ರಿಂದ ನಡೆಯುವ ಸಭಾ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ರಾಜ್ಯಾಧ್ಯಕ್ಷರಾದ ಮಹೇಶ್ ಜೋಶಿ ಅವರು ಚಾಲನೆ ನೀಡಲಿದ್ದಾರೆ.ಸಂಕಲ್ಪ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ್ ಹೆಗಡೆ ಯಲ್ಲಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಎಮ್.ಕೆ ಭಾಸ್ಕರ್ ರಾವ್, ಕೆಡಿಸಿಸಿ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕಾ, ಹೊಸಾಕುಳಿ ಗ್ರಾಮಪಂಚಾಯತ ಅಧ್ಯಕ್ಷೆ ನಾಗರತ್ನ ನಾಯ್ಕ, ಉಪಾಧ್ಯಕ್ಷ ಕಿರಣ್ ಹೆಗಡೆ ಪಾಲ್ಗೊಳ್ಳುವರು. ಜೀವಜಲ ಕಾರ್ಯಪಡೆ ಶಿರಸಿಯ ಅಧ್ಯಕ್ಷರಾದ ಶ್ರೀನಿವಾಸ್ ಹೆಬ್ಬಾರ್, ಇಂಟನ್ರ್ಯಾಷನಲ್ ಸೊಸೈಟಿ ಫಾರ್ ಸೆಕ್ಸುವಲ್ ಮೆಡಿಸಿನ್ ಇವರ ಜಾಗತಿಕ ಮಟ್ಟದ ಪ್ರಶಸ್ತಿ ಪುರಸ್ಕೃತ ಡಾ. ಗಜಾನನ ಭಟ್ ನವಿಲಗೋಣ, ಅನುರಾಧ ಶಾಸ್ತ್ರಿ ವೈದ್ಯ ದಂಪತಿಗಳು ಹಾಗೂ ನಿವೃತ್ತ ಸೈನಿಕ ನಾರಾಯಣ ಗಾವಡಿ ಅವರನ್ನು ಸನ್ಮಾನಿಸಲಾಗುವುದು ಎಂದರು. ಗಣೇಶ್ ದೇಸಾಯಿ ಬೆಂಗಳೂರು ಹಾಗೂ ತಂಡದವರಿಂದ ಭಾವ ಸಂಗೀತ, ಬಡಗುತಿಟ್ಟಿನ ನುರಿತ ಕಲಾವಿದರಿಂದ ಯಕ್ಷಗಾನ ನಡೆಯಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದ್ದಾರೆ.
ಪತ್ರಿಕಾಗೊಷ್ಟಿಯಲ್ಲಿ ಗೋಪಾಲಕೃಷ್ಣ ಹೆಗಡೆ ಕಲ್ಬಾಗ, ವಿ.ಎನ್.ಹೆಗಡೆ, ಶಂಭು ಹೆಗಡೆ, ಎಲ್.ಎ. ಭಟ್ ಮತ್ತಿತರರು ಉಪಸ್ಥಿತರಿದ್ದರು.