• Slide
    Slide
    Slide
    previous arrow
    next arrow
  • ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಮಾದರಿ ಸಂಘ; ಸುರೇಶ್ಚಂದ್ರ ಕೆಶಿನ್ಮನೆ

    300x250 AD

    ಶಿರಸಿ: ತಾಲೂಕಿನ ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆಯು ಡಿ.22 ರ ಬುಧವಾರದಂದು ಜರುಗಿತು.

    ಧಾರವಾಡ ಹಾಲು ಒಕ್ಕೂಟದ ಉತ್ಪಾದಕರ ಸಹಕಾರಿ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿಯ ನಿರ್ದೇಶಕರಾದ ಸುರೇಶ್ಚಂದ್ರ ಕೆ ಹೆಗಡೆ ಕೆಶಿನ್ಮನೆ ಅವರು ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘವು ಕಾರ್ಯಾರಂಭವಾಗಿ ಕೇವಲ ನಾಲ್ಕೂವರೆ ತಿಂಗಳಿನಲ್ಲಿ ರೂ.40 ಸಾವಿರ ಲಾಭಗಳಿಸಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನಲ್ಲಿ ಮಾದರಿ ಸಂಘವಾಗಿದೆ. ಈ ಭಾಗದ ಜನರು ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ಬಹಳ ಉತ್ಸುಕತೆಯಿಂದ ತೊಡಗಿಸಿಕೊಂಡಿದ್ದು ಇದರಿಂದ ತಮ್ಮ ಹಾಗೂ ಸಂಘದ ಅಭಿವೃದ್ಧಿಗೆ ಕಾರಣೀಕರ್ತರಾಗಿದ್ದಾರೆ ಎಂದರು. ಸಂಘ ಸ್ಥಾಪನೆಯಾದಾಗಿನಿಂದ ಇಲ್ಲಿಯ ವರೆಗೆ ಒಳ್ಳೆಯ ಗುಣಮಟ್ಟದ ಹಾಲನ್ನು ಶೇಖರಿಸುತ್ತಾ ರೈತರಿಗೆ ಯೋಗ್ಯ ದರವನ್ನು ನೀಡುತ್ತಾ ಬಂದಿದ್ದು, ಇದರಿಂದ ಇಲ್ಲಿನ ಭಾಗದ ಜನರಿಗೆ ಇನ್ನೂ ಅತೀ ಹೆಚ್ಚಿನ ಹಾಲನ್ನು ಉತ್ಪಾದಿಸುವಲ್ಲಿ ಸಹಕಾರಿಯಾಗಿದೆ ಎಂದರು. ಸಂಘಗಳು ಗಳಿಸಿದ ಲಾಭದಲ್ಲಿ ಹಾಲು ಉತ್ಪಾದಕ ರೈತರಿಗೆ ಉತ್ತೇಜನ ನೀಡುವ ಯೋಜನೆ ಹಾಗೂ ಅನುಕೂಲಗಳನ್ನು ಹಾಲು ಸಂಘಗಳು ಕಲ್ಪಿಸಿಕೊಡುವಂತೆ ಅವರು ತಿಳಿಸಿದರು.

    ಕೃಷಿಗೆ ಅದರಲ್ಲೂ ನಮ್ಮ ಭಾಗದಲ್ಲಿ ರೈತರ ಕೃಷಿಗಾಗಿ ಹೈನುಗಾರಿಕೆಯು ತುಂಬಾ ಅತ್ಯಾವಶ್ಯಕವಾಗಿದ್ದು, ಇದರಿಂದ ಕೃಷಿ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಗಳಾಗಲು ಹೈನುಗಾರಿಕೆಯ ಬಗ್ಗೆ ಹೆಚ್ಚಿನ ಒಲವು ಹೊಂದುವಂತೆ ತಿಳಿಸಿದರು. ಕೋರೋನಾ ಸೋಂಕಿನ ಕಷ್ಟ ಸಂದರ್ಭದಲ್ಲಿ ಅನೇಕ ಯುವಕರು ಪಟ್ಟಣ ತೊರೆದು ಹಳ್ಳಿಗಳಿಗೆ ಬಂದು ಹೈನುಗಾರಿಕೆಯನ್ನು ಪ್ರಾರಂಭಿಸಿ ಯಶಸ್ವಿಯಾಗಿದ್ದು ಇನ್ನುಳಿದ ಯುವ ಸಮೂಹಕ್ಕೆ ಅವರು ಮಾದರಿಯಾಗಿದ್ದಾರೆ, ಹಾಗೂ ಯುವಕರು ಸಹ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಈ ಮೂಲಕ ಅವರು ಕರೆ ನೀಡಿದರು.


    ಹಾಲು ಉತ್ಪಾದಕರ ಹಿತಕೊಕ್ಕಸ್ಕರ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಧಾರವಾಡ ಹಾಲು ಒಕ್ಕೂಟ ಮತ್ತು ಕಲ್ಯಾಣ ಸಂಘ ಈಗಾಗಲೇ ಕೈಗೊಂಡಿದ್ದು ಅದರಲ್ಲಿ ಜಾನುವಾರು ವಿಮೆ, ಕಲ್ಯಾಣ ಸಂಘದ ಸದಸ್ಯರ ವಿಮೆ, ಹೈನೋದ್ಯಮಕ್ಕೆ ಅನುಕೂಲಕವಾಗುವ ಉಪಕರಣಗಳ ವಿತರಣೆಯಂತಹ ಯೋಜನೆಗಳು ಈಗಾಗಲೇ ಕಾರ್ಯರೂಪದಲ್ಲಿದ್ದು ಇನ್ನೂ ಹಲವು ಯೋಜನೆಗಳನ್ನು ಶೀಘ್ರದಲ್ಲಿಯೇ ಅನುಷ್ಠಾನಕ್ಕೆ ತರಲಾಗುವುದು ಎಂದರು. ಒಕ್ಕೂಟ ಹಾಗೂ ಕಲ್ಯಾಣ ಸಂಘದಿಂದ ನೀಡಲಾಗುವ ಸೌಕರ್ಯಗಳ ಪ್ರಯೋಜವನ್ನು ಪ್ರತೀಯೊಬ್ಬ ಹಾಲು ಉತ್ಪಾದಕ ರೈತನೂ ಸಹ ಪಡೆಯುವಂತಾಗಬೇಕು ಎಂದರು.

    300x250 AD


    ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದ ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಸೀತಾರಾಮ ಭಟ್ ಅವರು ಸಂಘವು ಕಾರ್ಯಾರಂಭವಾದ ಕೇವಲ ನಾಲ್ಕೂವರೆ ತಿಂಗಳ ಅವಧಿಯಲ್ಲಿ ರೂ. 04,16,660 ಮೊತ್ತದ 18,128 ಲೀ. ಹಾಲನ್ನು ಉತ್ಪಾದಕರಿಂದ ಖರೀದಿಸಿ ಧಾರವಾಡ ಹಾಲು ಒಕ್ಕೂಟಕ್ಕೆ ಮಾರಾಟ ಮಾಡಿದ್ದು, 1783 ಲೀ ನಷ್ಟು ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿ ರೂ. 62,405 ಗಳನ್ನು, ರೂ. 94,265 ಗಳನ್ನು ಪಶು ಆಹಾರ ಮಾರಾಟದಿಂದ ಗಳಿಸಿ ಸಂಘವು ರೂ.88,178 ಗಳ ವ್ಯಾಪಾರಿ ಲಾಭ ಗಳಿಸಿದ್ದು, ವ್ಯಾವಹಾರಿಕ ವರ್ಷದಲ್ಲಿ ರೂ.40 ಸಾವಿರಗಳ ನಿವ್ವಳ ಲಾಭವನ್ನು ಸಂಘ ಗಳಿಸಿದೆ ಎಂದರು. ಹಾಗೂ ಸಂಘದ ಸದಸ್ಯರಿಗೆ ಶೇ.10 ರಷ್ಟು ಡಿವಿಡೆಂಡ್ ಘೋಷಣೆ ಮಾಡಿದ್ದು, ಹಾಲು ಉತ್ಪಾದಕರಿಗೆ ರೂ. 12,246 ಗಳನ್ನು ಬೋನಸ್ ರೂಪದಲ್ಲಿ ನೀಡಲು ನಿರ್ಧರಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಂಘದ ಸದಸ್ಯರಿಗೆ ಶೇರು ಪ್ರಮಾಣ ಪತ್ರವನ್ನು ನೀಡಲಾಯಿತು.


    ಈ ಸಂದರ್ಭದಲ್ಲಿ ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಸುರೇಶ್ಚಂದ್ರ ಹೆಗಡೆಯವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಹಾಗೂ ಸಂಘಕ್ಕೆ ಅತೀ ಹೆಚ್ಚು ಒಳ್ಳೆಯ ಗುಣಮಟ್ಟದ ಹಾಲು ಪೂರೈಸಿದ ವಿನಾಯಕ ಗಣಪತಿ ಹೆಗಡೆ ಸಾಲೇಕೊಪ್ಪ, ದಾಮೋದರ ಮಂಜುನಾಥ ಮೇಸ್ತ ಹಾಗೂ ಶ್ರೀಪಾದ ಗಣಪತಿ ಹೆಗಡೆ ಸೋಮನಳ್ಳಿ ಇವರುಗಳಿಗೆ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಬೊಪ್ಪನಳ್ಳಿ ಹಾಲು ಸಂಘದ ಅಧ್ಯಕ್ಷರು ಶಾಲು ಹೊದಿಸಿ ಸನ್ಮಾನಿಸಿದರು.


    ಬೊಪ್ಪನಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಭಾಕರ ಶಂಕರ ಹೆಗಡೆ ಅವರು ಮಾತನಾಡುತ್ತಾ ಅತೀ ಕಡಿಮೆ ಸಮಯದಲ್ಲಿ ನಮ್ಮ ಸಂಘವು ಉತ್ತಮ ಪ್ರಗತಿ ಸಾಧಿಸಿದ್ದು, ಇದು ಅತ್ಯಂತ ಖುಷಿಯ ಸಂಗತಿಯಾಗಿದ್ದು, ಸಂಘದ ಏಳೆಗೆಗೆ ಶ್ರಮಿಸಿದ ಪ್ರತೀಯೊಬ್ಬ ಹಾಲು ಉತ್ಪಾದಕ ರೈತರಿಗೆ, ಸಂಘದ ಆಡಳಿತ ಮಂಡಳಿಯ ಸರ್ವ ಸದಸ್ಯರಿಗೆ, ಮುಖ್ಯ ಕಾರ್ಯನಿರ್ವಾಹಕರಿಗೆ ಹಾಗೂ ಸಂಘದ ಕುಂದು ಕೊರತೆಗಳನ್ನು ಆಲಿಸಿ ಅವುಗಳಿಗೆ ಶೀಘ್ರ ಸ್ಪಂದಿಸಿ ಸಂಘ ಹಾಗೂ ಈ ಭಾಗದ ಹಾಲು ಉತ್ಪಾದಕರ ರೈತರ ಜೊತೆ ಸದಾ ಇರುವ ರೈತಪರ ಕೆಲಸಗಳನ್ನು ಮಾಡುತ್ತಾ ಬಂದಿರುವ ಧಾರವಾಡ ಹಾಲು ಒಕ್ಕೂಟದ ಕಲ್ಯಾಣ ಸಂಘದ ಅಧ್ಯಕ್ಷರು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿಯ ನಿರ್ದೇಶಕರಾದ ಸುರೇಶ್ಚಂದ್ರ ಕೆ ಹೆಗಡೆ ಕೆಶಿನ್ಮನೆ ಅವರಿಗೆ ಸಂಘ ಹಾಗೂ ಹಾಲು ಉತ್ಪಾದಕರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸಿದರು. ಸಂಘದ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯನ್ನು ಮಾಡಿದ ಆರ್.ವಿ.ಹೆಗಡೆಯವರಿಗೆ ಧನ್ಯವಾದಗಳನ್ನು ತಿಳಿಸಿದರು.

    ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಸೀತಾರಾಮ ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಘದ ಉಪಾಧ್ಯಕ್ಷರಾದ ವಿನಾಯಕ ಪ್ರಭಾಕರ ಹೆಗಡೆ ವಂದಿಸಿದರು. ಆಡಳಿತ ಮಂಡಳಿಯ ಸದಸ್ಯರುಗಳು, ಹಾಲು ಉತ್ಪಾದಕರುಗಳು ಹಾಗೂ ವಿಸ್ತರಣಾ ಸಮಾಲೋಚಕರಾದ ದಯಾನಂದ ಬೋರ್ಕರ್ ಇವರುಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top