
ಯಲ್ಲಾಪುರ: ಆರೋಗ್ಯಕರ ಜೀವನಕ್ಕಾಗಿ ಗಿಡನೆಡುವ ಮತ್ತು ಪರಿಸರವನ್ನು ಸಂರಕ್ಷಿಸುವ ಕಾರ್ಯವನ್ನು, ಎಲ್ಲರೂ ಮಾಡಬೇಕು. ಗಿಡಗಳನ್ನು ನೆಟ್ಟು ಪೆÇೀಷಿಸುವುವದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದು ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಪಟ್ಟಣದ ನಾಯಕನಕರ ಶ್ರೀ ಶಾರದಾಂಬಾ ದೇವಾಲಯದ ಆವಾರದಲ್ಲಿ ವೃಕ್ಷಾರೋಪಣ ಮಾಡಿ ಆಶೀರ್ವಚನ ನೀಡಿದರು. ಮರಗಳನ್ನು ಪರಿಸರವನ್ನು ನಾಶಮಾಡುವುದು ಅಧರ್ಮ. ವೃಕ್ಷಗಳನ್ನು ಕಡಿಯುವುದು ದಂಡನಾರ್ಹ ಅಪರಾಧ ಎಂಬುದು ಋಷಿ ವಾಕ್ಯವೂ ಆಗಿದೆ. ಇಂತಹ ಅಧರ್ಮ ಕೆಲಸವನ್ನು ಯಾರೂ ಮಾಡಬಾರದು. ಸಮಾಜದಲ್ಲಿ ಅಧರ್ಮ ಹೆಚ್ಚಾದಾಗ ಮಹಾ ವ್ಯಾಧಿಗಳು ಕಾಣಿಸಿಕೊಳ್ಳುತ್ತವೆ.
ಇಂದು ಜಗತ್ತನ್ನು ಕಾಡುತ್ತಿರುವ ಕೊರೋನಾ ಮಹಾಮಾರಿಯು ವಕ್ಕರಿಸಲು ಜಗತ್ತಿನಲ್ಲಿ ಹೆಚ್ಚುತ್ತಿರುವ ಅಧರ್ಮವೇ ಕಾರಣವಾಗಿದೆ. ನಾನಾ ಕಾರಣಗಳಿಂದಾಗಿ ಇಂದು ಜನರು ಧರ್ಮಪ್ರಜ್ಞೆಯನ್ನು ಮರೆಯುತ್ತಿದ್ದಾರೆ. ನಿತ್ಯ ಧರ್ಮಾನುಷ್ಠಾನ ಮಾಡುವುದನ್ನು ನಾವು ಮರೆಯಬಾರದು. ದೈವಿ ಅನುಗ್ರಹಕ್ಕೆ ಧರ್ಮ ಅವಶ್ಯ ಎಂದ ಅವರು, ಸಸ್ಯನಾಶ,ಪರಿಸರ ನಾಶ,ಬೇಕ ಕೊಳವೆಬಾವಿ ತೋಡುವುದು, ನಿತ್ಯಾನುಷ್ಠಾನ ಮಾಡದಿರುವುದು, ವೇದಗಳ ಕುರಿತು ನಿರ್ಲಕ್ಷ್ಯ, ಅಗ್ನಿ ಆರಾಧನೆಯನ್ನು ನಿರ್ಲಕ್ಷಿಸುವದು ಅಧರ್ಮವೇ ಆಗಿದೆ. ಧರ್ಮಾಚರಣೆಯು ಮನೆಯಿಂದಲೇ ಪ್ರಾರಂಭವಾಗಬೇಕು. ಯುಕ್ತವಾದ ಧರ್ಮಾಚರಣೆ ಮಾಡುವ ಮೂಲಕ ನಮ್ಮ ಬದುಕನ್ನು ಹಸನಾಗಿಸಿಕೊಳ್ಳಬೇಕು ಎಂದರು. ಕೊರೋನಾ ಸೋಂಕಿನ ಕುರಿತು ಜಾಗೃತರಾಗಿರಬೇಕು, ನಿಯಮಾವಳಿಗಳ ಪಾಲನೆ ಹಾಗೂ ಮುನ್ನೆಚ್ಚರಿಕೆ ಅಗತ್ಯ ಎಂದರು.
ವೃಕ್ಷಾರೋಪಣ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ್, ಏಸಿಎಫ್ ಅಶೋಕ ಭಟ್ಟ, ಯಲ್ಲಾಪುರ ವಲಯ ಅರಣ್ಯಾಧಿಕಾರಿ ಬಾಲಸುಬ್ರಹ್ಮಣ್ಯ, ಶಾರದಾಂಬಾ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಶಂಕರ ಭಟ್ಟ, ಕಾರ್ಯದರ್ಶಿ ಶಂಕರ ಭಟ್ಟ ತಾರಿಮಕ್ಕಿ, ವೇ.ಶಂಕರ ಭಟ್ಟ ಕಟ್ಟೆ, ವೇ.ರಾಮಚಂದ್ರ ಭಟ್ಟ ಹಿತ್ತಕಾರಗದ್ದೆ, ಅರ್ಚಕ ವೇ.ಗೋಪಾಲಕೃಷ್ಣ ಭಟ್ಟ ಕುಂಕಿಪಾಲ್, ಪ್ರಮುಖರಾದ ಬಿ.ಜಿ.ಹೆಗಡೆ ಗೇರಾಳ, ಸುಬ್ರಹ್ಮಣ್ಯ ಹೆಗಡೆ, ಜಿ.ಎನ್.ಭಟ್ ತಟ್ಟಿಗದ್ದೆ, ದೇವಾಲಯದ ವ್ಯವಸ್ಥಾಪಕ ಅಶೋಕ ಶೆಟ್ಟಿ, ಡಿ.ವಿ.ಹೆಗಡೆ, ಮಾತೃಮಂಡಳಿಯ ಪ್ರಮುಖರಾದ ತ ಶಂಕರ, ರಮಾ ದೀಕ್ಷಿತ್ ಮುಂತಾದವರು ಇದ್ದರು.
ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜ್ಯೋತಿರಾದಿತ್ಯ ಭಟ್ ಯಲ್ಲಾಪುರ ಅವರನ್ನು ಸ್ವರ್ಣವಲ್ಲೀ ಶ್ರೀಗಳು ಸನ್ಮಾನಿಸಿ, ಆಶೀರ್ವದಿಸಿದರು.