• first
  second
  third
  previous arrow
  next arrow
 • ಇನಸ್ಪೈರ್ ಪುರಸ್ಕಾರ; ಲಯನ್ಸ ಶಾಲೆಯ ಕೃಷ್ಣ, ಸುವಿಧಾ ವಿದ್ಯಾರ್ಥಿಗಳು ಆಯ್ಕೆ

  300x250 AD

  ಶಿರಸಿ: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಜಂಟಿಯಾಗಿ ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಜ್ಞಾನಕ್ಕೆ ಪ್ರೋತ್ಸಾಹ ನೀಡಲು ನಡೆಸುತ್ತಿರುವ ರಾಷ್ಟ್ರಮಟ್ಟದ ಇನಸ್ಪೈರ್ ಪುರಸ್ಕಾರದ 2021-22ರ ಸ್ಪರ್ಧೆಗಳಲ್ಲಿ ನಗರದ ಲಯನ್ಸ್ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

  300x250 AD


  ಶಿರಸಿ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿಯ ವಿದ್ಯಾರ್ಥಿ ಕುಮಾರ್ ಕೃಷ್ಣ ಜಿ. ಭಟ್ ಮತ್ತು 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸುವಿಧಾ ಹೆಗಡೆ ತಾವು ತಯಾರಿಸಿದ ನಾವಿನ್ಯಪೂರ್ಣ ವೈಜ್ಞಾನಿಕ ಮಾದರಿಗಳಿಗೆ ಈ ಪುರಸ್ಕಾರ ಪಡೆದಿದ್ದಾರೆ. ವಿಜ್ಞಾನ ವಿಭಾಗದ ನವೀನ ಸಂಶೋಧನೆಗಳಿಗೆ ಮೀಸಲಾದ ಈ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೂ ಅವರ ಪಾಲಕರಿಗೂ ಹಾಗೂ ಮಾರ್ಗದರ್ಶಕ ಶಿಕ್ಷಕ ಸಚಿನ್ ಕೊಡಿಯಾ ಹಾಗೂ ಗುರುಪ್ರಸಾದ ನಾಯಕ್ ಇವರಿಗೆ ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಲಯನ್ಸ್ ಕ್ಲಬ್ ಬಳಗ, ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಾಲೆಯ ಶಿಕ್ಷಕ ವೃಂದವು ಹಾರ್ದಿಕವಾಗಿ ಅಭಿವಂದಿಸಿ ಶುಭ ಹಾರೈಸಿದೆ.

  Share This
  300x250 AD
  300x250 AD
  300x250 AD
  Back to top