ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ(ರಿ) ಶ್ರೀ ಸೊಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರು ಶ್ರೀ ಭಗವದ್ಗೀತಾ ಅಭಿಯಾನ 2021 ರ ಅಂಗವಾಗಿ ಆನ್ಲೈನ್ ನಲ್ಲಿ ಡಿ.19 ರಂದು ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಸ್ಫರ್ದೆಗಳಲ್ಲಿ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
10ನೇ ತರಗತಿಯ ಯಶಸ್ವಿನಿ ಹೆಗಡೆ ಹಿರಿಯರ ವಿಭಾಗ,ಕಂಠಪಾಠ ಸ್ಪರ್ಧೆಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಹಾಗೂ 5ನೇ ವರ್ಗದ ವರ್ಷಿಣಿ ಹೆಗಡೆ ಕಿರಿಯರ ವಿಭಾಗ, ಕಂಠಪಾಠದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ಮಾರ್ಗದರ್ಶಿ ಶಿಕ್ಷಕ ಸಿಂಧೂರ್ ಭಟ್ ಇವರಿಗೆ ಕಾರ್ಯದರ್ಶಿ ಎಲ್.ಎಂ ಹೆಗಡೆ, ಆಡಳಿತಾಧಿಕಾರಿ ವಿದ್ಯಾ ನಾಯ್ಕ ಹಾಗೂ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.