ಅಂಕೋಲಾ: ಹೆಜ್ಜೇನು ದಾಳಿಗೊಳಗಾಗಿದ್ದ ಅಬಕಾರಿ ಇಲಾಖೆಯ ಮುಖ್ಯ ಪೇದೆ ಹಸನ್ ಖಾನ್ ಕರೀಂ ಖಾನ್ ಗುರುವಾರ ಸಾವನ್ನಪ್ಪಿದ್ದಾನೆ.
ಅಂಕೋಲಾದಲ್ಲಿನ ಅಬಕಾರಿ ಇಲಾಖೆಯ ಮುಖ್ಯ ಪೇದೆ ಹಸನ್ ಖಾನ್ ಕರೀಂ ಖಾನ್ ಎಂಬಾತ ಅಜ್ಜಿಕಟ್ಟ ನೀಲಂಪುರದಲ್ಲಿ ಹೆಜ್ಜೇನು ದಾಳಿಗೆ ಒಳಗಾಗಿದ್ದ. ಈತನನ್ನು ಹೆಚ್ಚಿನ ಚಿಕಿತ್ಸೆಗೆಂದು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾನೆ.
ಅಂಕೋಲಾ ಬಸ್ ನಿಲ್ದಾಣದ ಪಕ್ಕದಲ್ಲಿ ಹೆಜ್ಜೇನು ನೊಣಗಳ ದಾಳಿ ಹೆಚ್ಚಾಗಿದ್ದು, ಕಳೆದ 20 ದಿನಗಳಿಂದಲೂ ದಾಳಿ ನಡೆಸುತ್ತಿದ್ದಾವೆ ಎಂದು ಹೇಳುತ್ತಿದ್ದಾರೆ. ಹಲವು ವಿದ್ಯಾರ್ಥಿಗಳೂ ಜೇನು ದಾಳಿಯಿಂದಾಗಿ ಆಸ್ಪತ್ರೆ ದಾಖಲಾಗುತ್ತಿದ್ದಾರೆ.