• first
  second
  third
  previous arrow
  next arrow
 • ಹೆಗಡೆಕಟ್ಟಾ ಶಾಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ

  300x250 AD


  ಶಿರಸಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗಡೆಕಟ್ಟಾದಲ್ಲಿ 1ನೇ ಸಮುದಾಯದತ್ತ ಶಾಲೆಯ ಅಂಗವಾಗಿ ಬ್ರಹ್ಮಕುಮಾರಿ ವೀಣಾಜಿ ಇವರಿಂದ “ಮಕ್ಕಳ ಸರ್ವಾಂಗೀಣ ವಿಕಾಸದಲ್ಲಿ ಪಾಲಕರ ಪಾತ್ರ” ದ ಕುರಿತು ಡಿ.22 ರಂದು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

  ವೀಣಾಜಿರವರು ಮಾತನಾಡುತ್ತಾ ಮಕ್ಕಳಲ್ಲಿ ಧನಾತ್ಮಕ ಚಿಂತನೆ ಬೆಳೆಸುವುದು, ದೀಪಾಧ್ಯಾನ ರೂಢಿಸುವುದು, ಚಟಗಳನ್ನು ಬಿಡಿಸುವಲ್ಲಿ ತಾಯಂದಿರು ಮಾಡಬೇಕಾದ ಕಾರ್ಯಗಳು, ದೇವರಲ್ಲಿ ನಂಬಿಕೆ, ಮಕ್ಕಳಲ್ಲಿ ಏಕಾಗೃತೆ ಬೆಳೆಸುವಲ್ಲಿ ತಾಯಂದಿರ ಪಾತ್ರ, ಇವುಗಳ ಕುರಿತು ಸವಿವರವಾಗಿ ತಿಳಿಸಿದರು.

  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‍ಡಿಎಮ್‍ಸಿ ಅಧ್ಯಕ್ಷ ದೇವರು ಹೆಗಡೆ ವಹಿಸಿಕೊಂಡಿದ್ದರು. ಅತಿಥಿಗಳಾಗಿ ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷ ಜ್ಯೋತಿ ಭಟ್ಟರವರು ಆಗಮಿಸಿದರು. ಅವರು ಮಾತನಾಡುತ್ತಾ ತಮ್ಮ ಸಂಘಟನೆಯ ಕಾರ್ಯ ಚಟುಚಟಿಕೆಗಳನ್ನು ತಿಳಿಸಿ ಅದರ ಪ್ರಯೋಜನ ಪಡೆದುಕೊಳ್ಳುವಂತೆ ಕರೆ ಇತ್ತರು.

  300x250 AD

  ಕಾರ್ಯದರ್ಶಿ ಶೈಲಜಾ ಗೋನ್ರ್ಮನೆ, ಸದಸ್ಯರಾದ ಸಂಧ್ಯಾ ಕುರ್ಡೆಕರ್‍ರವರು ಆಗಮಿಸಿದ್ದರು. ಪರಿವೀಕ್ಷಕರಾಗಿ ಗಜಾನನ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶೈಲೇಂದ್ರ ಎಂ ಎಚ್ ರವರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸತೀಶ ಹೆಗಡೆಕಟ್ಟಾ, ಸಿ ಆರ್. ಪಿ. ಸತೀಶ ಹೆಗಡೆ, ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರುಗಳು, ಪಾಲಕ ಪೋಷಕರು, ಪ್ರೌಢಶಾಲಾ ಶಿಕ್ಷಕರು, ಉಪಸ್ಥಿತರಿದ್ದರು.


  ಉಮಾಬಾಯಿ ಹೆಗಡೆಯವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಅಮೀನಾಬಿ ರವರು ಸ್ವಾಗತಿಸಿದರು. ಜೂಲಿಯಟ್ ವಂದಿಸಿದರು.

  Share This
  300x250 AD
  300x250 AD
  300x250 AD
  Back to top